ADVERTISEMENT

GST, ನೋಟು ಅಮಾನ್ಯೀಕರಣ ರೈತರು, ಕಾರ್ಮಿಕರನ್ನು ಕೊಲ್ಲುವ ಅಸ್ತ್ರ: ರಾಹುಲ್ ಗಾಂಧಿ

ಪಿಟಿಐ
Published 9 ನವೆಂಬರ್ 2024, 13:02 IST
Last Updated 9 ನವೆಂಬರ್ 2024, 13:02 IST
<div class="paragraphs"><p>ರಾಹುಲ್ ಗಾಂಧಿ</p></div>

ರಾಹುಲ್ ಗಾಂಧಿ

   

(ಪಿಟಿಐ ಚಿತ್ರ)

ಜೆಮ್‌ಶೆಡ್‌ಪುರ: 'ನೋಟು ಅಮಾನ್ಯೀಕರಣ ಹಾಗೂ ಸರಕು ಮತ್ತು ಸೇವಾ ತೆರಿಗೆ ( ಜಿಎಸ್‌ಟಿ ) ನೀತಿಗಳು ದೇಶದಲ್ಲಿ ರೈತರು, ಕಾರ್ಮಿಕರು ಮತ್ತು ಬಡವರನ್ನು ಕೊಲ್ಲುವ ಅಸ್ತ್ರಗಳಾಗಿವೆ' ಎಂದು ಕೇಂದ್ರದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ADVERTISEMENT

ಜೆಮ್‌ಶೆಡ್‌ಪುರದಲ್ಲಿ ಶನಿವಾರ ಚುನಾವಣಾ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿ ಪ್ರೀತಿಯಲ್ಲಿ ನಂಬಿಕೆಯುಳ್ಳ ಇಂಡಿಯಾ ಕೂಟ ಹಾಗೂ ದ್ವೇಷದಲ್ಲಿ ನಂಬಿಕೆಯುಳ್ಳ ಬಿಜೆಪಿ-ಆರ್‌ಎಸ್‌ಎಸ್ ಸಿದ್ಧಾಂತಗಳ ನಡುವೆ ಯುದ್ಧ ನಡೆಯುತ್ತಿದೆ. ಇದು ಹಿಂಸಾಚಾರ ಮತ್ತು ಏಕತೆಯ ನಡುವಿನ ಹೋರಾಟವೂ ಆಗಿದೆ ಎಂದು ಅವರು ಹೇಳಿದ್ದಾರೆ.

ದೇಶದಲ್ಲಿ ನಿರುದ್ಯೋಗ ಹೆಚ್ಚಾಗಲು ನರೇಂದ್ರ ಮೋದಿಯವರ ನೀತಿಗಳು ಕಾರಣವಾಗಿವೆ. ಬಿಜೆಪಿ-ಆರ್‌ಎಸ್‌ಎಸ್ ದೇಶವನ್ನು ಜಾತಿ, ಧರ್ಮ ಮತ್ತು ಭಾಷೆಯ ಆಧಾರದ ಮೇಲೆ ವಿಭಜಿಸಲು ರಾಜಕೀಯ ಮಾಡುತ್ತಿವೆ. ಆದರೆ ಕಾಂಗ್ರೆಸ್ ಭಾರತದ ಸಂವಿಧಾನವನ್ನು ರಕ್ಷಿಸಲು ಬಯಸುತ್ತದೆ ಎಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶದಲ್ಲಿ ಹಣ ಹೂಡಿಕೆ ಮಾಡುವ ಬಂಡವಾಳಶಾಹಿಗಳಿಗೆ ಹಣ ನೀಡುತ್ತಿದ್ದಾರೆ ಎಂದೂ ಅವರು ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.