ADVERTISEMENT

ನೋಟು ರದ್ದತಿಗೆ 6 ವರ್ಷ: ಪ್ರಧಾನಿ ವಿರುದ್ಧ ರಾಹುಲ್‌ ಗಾಂಧಿ ‘ಪೇ–ಪಿಎಂ‘ ಅಸ್ತ್ರ

ಪಿಟಿಐ
Published 8 ನವೆಂಬರ್ 2022, 13:30 IST
Last Updated 8 ನವೆಂಬರ್ 2022, 13:30 IST
   

ನವದೆಹಲಿ: ಕರ್ನಾಟಕದ ಬಿಜೆಪಿ ಸರ್ಕಾರದ ವಿರುದ್ಧ ‘ಪೇ–ಸಿಎಂ‘ ಅಭಿಯಾನ ಮಾಡಿದ್ದ ಕಾಂಗ್ರೆಸ್‌, ಇದೀಗ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪೇ–ಪಿಎಂ‘ ಅಸ್ತ್ರ ಬಳಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ಪೇ–ಪಿಎಂ‘ ಎಂದು ಕರೆದಿರುವ ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ, ತಮ್ಮ 2–3 ಕೋಟ್ಯಾಧಿಪತಿ ಸ್ನೇಹಿತರು ಭಾರತೀಯ ಆರ್ಥಿಕತೆಯಲ್ಲಿ ಏಕಸ್ವಾಮ ಹೊಂದುವಂತೆ ಮಾಡಲು ನೋಟು ರದ್ಧತಿ ನಿರ್ಧಾರ ತೆಗೆದುಕೊಂಡಿದ್ದರು‘ ಎಂದು ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ‘ನೋಟು ರದ್ಧತಿಯು, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳನ್ನು ಮುಗಿಸಿ, ತನ್ನ 2–3 ಕೋಟ್ಯಾಧಿಪತಿ ಸ್ನೇಹಿತರು ಭಾರತೀಯ ಆರ್ಥಿಕತೆಯಲ್ಲಿ ಏಕಸ್ವಾಮ್ಯ ಹೊಂದುವಂತೆ ಮಾಡಲು ‘ಪೇ–ಪಿಎಂ‘ ಮಾಡಿರುವ ಉದ್ದೇಶಪೂರ್ವಕ ನಡೆ‘ ಎಂದು ಅವರು ಟೀಕೆ ಮಾಡಿದ್ದಾರೆ.

ADVERTISEMENT

ನೋಟು ರದ್ದು ಮಾಡಿ ನ.8 ಕ್ಕೆ ಆರು ವರ್ಷ ಸಂದಿವೆ. ಈ ವೇಳೆಯೇ ರಾಹುಲ್‌ ಗಾಂಧಿ ಅವರು ‘ಪೇ–ಪಿಎಂ‘ ದಾಳಿ ಮಾಡಿದ್ದಾರೆ.

2016 ನವೆಂಬರ್‌ 8 ರಂದು ರಾತ್ರಿ 8 ಗಂಟೆಗೆ ರಾಷ್ಟ್ರವನ್ನು ಉದ್ದೇಶಿಸಿ ಮತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ₹500 ಹಾಗೂ ₹1000 ಮುಖಬೆಲೆಯ ನೋಟುಗಳನ್ನು ರದ್ದು ಮಾಡಿದ್ದಾಗಿ ಘೋಷಣೆ ಮಾಡಿದ್ದರು.

ದಿಢೀರ್‌ ತೆಗೆದುಕೊಂಡ ಈ ನಿರ್ಧಾರ ಟೀಕೆಗೆ ಗುರಿಯಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.