ADVERTISEMENT

ತಮಿಳುನಾಡು ಮಳೆ: ಹೆಚ್ಚಿನ ಹೆಲಿಕಾಪ್ಟರ್‌ಗಳಿಗೆ ಬೇಡಿಕೆ ಸಲ್ಲಿಸಿದ CM ಸ್ಟಾಲಿನ್

ಪಿಟಿಐ
Published 19 ಡಿಸೆಂಬರ್ 2023, 13:23 IST
Last Updated 19 ಡಿಸೆಂಬರ್ 2023, 13:23 IST
<div class="paragraphs"><p>ತಮಿಳುನಾಡಿನ ತೂತುಕುಡಿಯಲ್ಲಿ&nbsp; ಭಾರೀ ಮಳೆಯಿಂದಾಗಿ&nbsp; ಜಲಾವೃತವಾಗಿರುವ ಪ್ರದೇಶ</p></div>

ತಮಿಳುನಾಡಿನ ತೂತುಕುಡಿಯಲ್ಲಿ  ಭಾರೀ ಮಳೆಯಿಂದಾಗಿ  ಜಲಾವೃತವಾಗಿರುವ ಪ್ರದೇಶ

   

ಪಿಟಿಐ ಚಿತ್ರ

ಚೆನ್ನೈ: ಭಾರೀ ಮಳೆಯಿಂದ ಉಂಟಾಗಿರುವ ನೆರೆ ಪರಿಸ್ಥಿತಿಯನ್ನು ನಿಭಾಯಿಸಲು ಹೆಚ್ಚಿನ ಹೆಲಿಕಾಪ್ಟರ್‌ಗಳನ್ನು ನಿಯೋಜಿಸುವಂತೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಮಂಗಳವಾರ ಮನವಿ ಮಾಡಿದ್ದಾರೆ.

ADVERTISEMENT

ಈ ಕುರಿತು ಪತ್ರ ಬರೆದಿರುವ ಸ್ಟಾಲಿನ್, ‘ನೆರೆಯಲ್ಲಿ ಸಿಲುಕಿದವರನ್ನು ರಕ್ಷಿಸಲು ನೌಕಾಪಡೆ ಹಾಗೂ ಕರಾವಳಿ ನೌಕಾಪಡೆಯ ತಲಾ ಎರಡರಂತೆ ನಾಲ್ಕು ಹೆಲಿಕಾಪ್ಟರ್‌ಗಳು ಸದ್ಯ ರಕ್ಷಣಾ ಕಾರ್ಯದಲ್ಲಿ ತೊಡಗಿವೆ. ರಕ್ಷಣಾ ಕಾರ್ಯದೊಂದಿಗೆ ನೆರೆಯಲ್ಲಿ ಸಿಲುಕಿದವರಿಗೆ ಆಹಾರ ಪೊಟ್ಟಣ ನೀಡುವ ಕೆಲಸವನ್ನೂ ಮಾಡುತ್ತಿವೆ’ ಎಂದಿದ್ದಾರೆ.

‘ಆದರೆ ಹಾನಿಗೀಡಾದ ಪ್ರದೇಶ ವ್ಯಾಪ್ತಿ ಇನ್ನೂ ಹೆಚ್ಚಾಗಿರುವುದರಿಂದ ರಕ್ಷಣಾ ಕಾರ್ಯ ಇನ್ನಷ್ಟು ಚುರುಕುಗೊಳಿಸುವ ಅಗತ್ಯವಿದೆ. ಅದಕ್ಕಾಗಿ ಹೆಚ್ಚಿನ ಹೆಲಿಕಾಪ್ಟರ್ ನಿಯೋಜನೆ ಅಗತ್ಯ’ ಎಂದು ತಮ್ಮ ಪತ್ರದಲ್ಲಿ ಸ್ಟಾಲಿನ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.