ADVERTISEMENT

20 ದಿನಗಳ ಪೆರೋಲ್ ಮೇಲೆ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್‌ ಬಿಡುಗಡೆ

ಪಿಟಿಐ
Published 2 ಅಕ್ಟೋಬರ್ 2024, 11:17 IST
Last Updated 2 ಅಕ್ಟೋಬರ್ 2024, 11:17 IST
<div class="paragraphs"><p>ಗುರ್ಮೀತ್‌ ರಾಮ್‌ ರಹೀಮ್ ಸಿಂಗ್‌</p></div>

ಗುರ್ಮೀತ್‌ ರಾಮ್‌ ರಹೀಮ್ ಸಿಂಗ್‌

   

(ಪಿಟಿಐ ಚಿತ್ರ)

ಚಂಡೀಗಢ: ಅತ್ಯಾಚಾರ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ ಡೇರಾ ಸಚ್ಚಾ ಸೌದಾ ಪಂಥದ ಮುಖ್ಯಸ್ಥ ಗುರ್ಮೀತ್‌ ರಾಮ್‌ ರಹೀಮ್ ಸಿಂಗ್‌ ಅವರು 20 ದಿನಗಳ 'ಪೆರೋಲ್' ಮೇಲೆ ಜೈಲಿನಿಂದ ಇಂದು (ಬುಧವಾರ) ಬಿಡುಗಡೆಯಾಗಿದ್ದಾರೆ.

ADVERTISEMENT

ಹರಿಯಾಣದ ರೋಹಕ್ಟ್‌ನ ಸುನಾರಿಯಾ ಜೈಲಿನಿಂದ ಬಿಗಿ ಭದ್ರತೆಯ ನಡುವೆ ಗುರ್ಮೀತ್ ರಾಮ್ ರಹೀಮ್ ಸಿಂಗ್ ಹೊರನಡೆದರು.

ಈ ತಾತ್ಕಾಲಿಕ ಬಿಡುಗಡೆ ಅವಧಿಯನ್ನು ಗುರ್ಮೀತ್ ಅವರು ಉತ್ತರ ಪ್ರದೇಶದ ಬಾಗ್‌ಪತ್‌ನ ಬರ್ನಾವದಲ್ಲಿರುವ ಡೇರಾ ಆಶ್ರಮದಲ್ಲಿ ಕಳೆಯಲಿದ್ದಾರೆ.

ಗುರ್ಮೀತ್‌‌ಗೆ 20 ದಿನಗಳ ಪೆರೋಲ್ ಅನ್ನು ಹರಿಯಾಣ ಸರ್ಕಾರ ಮಂಜೂರು ಮಾಡಿದೆ. ಈ ಸಂದರ್ಭದಲ್ಲಿ ಚುನಾವಣಾ ಚಟುವಟಿಕೆ, ಪ್ರಚಾರ, ಭಾಷಣ ಮಾಡದಂತೆ ನಿರ್ಬಂಧಿಸಲಾಗಿದೆ.

ಅತ್ಯಾಚಾರ ಪ್ರಕರಣದಲ್ಲಿ ಗುರ್ಮೀತ್‌‌ಗೆ 20 ವರ್ಷಗಳ ಜೈಲುಶಿಕ್ಷೆ ವಿಧಿಸಲಾಗಿದೆ.

ಅಕ್ಟೋಬರ್ 5ರಂದು ಹರಿಯಾಣ ವಿಧಾನಸಭೆ ಚುನಾವಣೆ ನಡೆಯಲಿದ್ದು, ಅ.8ರಂದು ಫಲಿತಾಂಶ ಹೊರಬೀಳಲಿದೆ. ಈ ವೇಳೆ ಗುರ್ಮೀತ್‌ಗೆ ಪೆರೋಲ್ ನೀಡುವುದನ್ನು ವಿರೋಧ ಪಕ್ಷಗಳು ಟೀಕಿಸಿವೆ.

ಈ ಹಿಂದೆ ಆಗಸ್ಟ್‌ನಲ್ಲಿ ಪಂಜಾಬ್ ವಿಧಾನಸಭೆ ಚುನಾವಣೆ ವೇಳೆ ಗುರ್ಮೀತ್‌, 21 ದಿನಗಳ 'ಫರ್ಲೊ' (ದೀರ್ಘಾವಧಿ ಜೈಲು ಶಿಕ್ಷಗೆ ಒಳಗಾಗಿರುವವರಿಗೆ ತಾತ್ಕಾಲಿಕ ಬಿಡುಗಡೆ) ಮೇಲೆ ಬಿಡುಗಡೆಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.