ADVERTISEMENT

ಪಕ್ಷಕ್ಕೆ ಮರಳಿ ಬಂದರೆ ಸ್ವಾಗತ: ಆದಿತ್ಯ ಠಾಕ್ರೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2022, 13:59 IST
Last Updated 10 ಜುಲೈ 2022, 13:59 IST

ಮುಂಬೈ:ನಂಬಿದವರೇ ಪಕ್ಷಕ್ಕೆ ದ್ರೋಹ ಬಗೆದ ಹೊರತಾಗಿಯೂ ಶಿವಸೇನಾದ ತಳಮಟ್ಟದ ಕಾರ್ಯಕರ್ತರು ಸಂಘಟನೆಯೊಂದಿಗೆ ದೃಢವಾಗಿ ಇದ್ದಾರೆ ಎಂದು ಶಾಸಕ ಆದಿತ್ಯ ಠಾಕ್ರೆ ಹೇಳಿದರು.

'ನಿಷ್ಠಾ ಯಾತ್ರೆ'ಯ ಭಾಗವಾಗಿ ಮುಂಬೈ ಉತ್ತರದ ಉಪನಗರ ದಹಿಸರ್‌ನಲ್ಲಿ ಮಾತನಾಡಿದ ಅವರು, ಪಕ್ಷ ತೊರೆಯಲು ಬಯಸಿದವರು ಹೋಗಿದ್ದಾರೆ. ಆದರೆ, ತಳಮಟ್ಟದ ಶಿವಸೈನಿಕರು ನನ್ನ ತಂದೆ, ಮಾಜಿ ಮುಖ್ಯಮಂತ್ರಿ ಉದ್ದವ್‌ ಠಾಕ್ರೆ ನೇತೃತ್ವದ ಪಕ್ಷ ಬೆಂಬಲಿಸುತ್ತಿದ್ದಾರೆ.ಪ್ರತಿ ಕ್ಷೇತ್ರದಲ್ಲಿ ಎರಡರಿಂದ ಮೂರು ಶಿವಸೈನಿಕರು ಇದ್ದಾರೆ. ಪುರುಷರು ಮತ್ತು ಮಹಿಳೆಯರು ಪ್ರತಿಸ್ಪರ್ಧಿಗಳನ್ನು ಎದುರಿಸಲು ಸಿದ್ಧರಾಗಿದ್ದಾರೆ ಎಂದು ಠಾಕ್ರೆ ಹೇಳಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪಕ್ಷ ತೊರೆದವರಿಗೆ ‌‌‌ಚುನಾವಣೆ ಎದುರಿಸುವ ಧೈರ್ಯವಿರಬೇಕು. ಹಿಂತಿರುಗಲು ಬಯಸುವ ಎಲ್ಲರಿಗೂ 'ಮಾತೋಶ್ರೀ' ( ಠಾಕ್ರೆ ಖಾಸಗಿ ನಿವಾಸ) ಬಾಗಿಲು ತೆರೆದಿರುತ್ತದೆ’ ಎಂದು ಅವರು ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.