ಮುಂಬೈ: ಮಹಾರಾಷ್ಟ್ರದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಭರ್ಜರಿ ಗೆಲುವು ದಾಖಲಿಸಿದೆ.
ನಾಗ್ಪರ ನೈರುತ್ಯ ಕ್ಷೇತ್ರದ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ದೇವೇಂದ್ರ ಫಡಣವೀಸ್ ಆರನೇ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ನಾಗ್ಪುರ ನಗರ ಪಾಲಿಕೆಯ ಕಾರ್ಪೋರೇಟ್ ಆಗುವ ಮೂಲಕ ರಾಜಕೀಯ ಪ್ರವೇಶಿಸಿ ಮಹಾರಾಷ್ಟ್ರದ ಮುಖ್ಯಮಂತ್ರಿ ಸ್ಥಾನ ಅಲಂಕರಿಸುವವರೆಗಿನ ದೇವೇಂದ್ರ ಫಡಣವೀಸ್ ಅವರ ರಾಜಕೀಯ ಹಾದಿ ರೋಚಕವಾಗಿದೆ.
ದೇವೇಂದ್ರ ಫಡಣವೀಸ್ ಮರಾಠ ರಾಜಕೀಯ ಮತ್ತು ರಾಜಕಾರಣಿಗಳ ಪ್ರಾಬಲ್ಯವಿರುವ ಮಹಾರಾಷ್ಟ್ರದಲ್ಲಿ ಶಿವಸೇನೆಯ ಮನೋಹರ್ ಜೋಶಿ ಬಳಿಕ ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿಯಾದ ಎರಡನೇ ಬ್ರಾಹ್ಮಣ ಎಂಬ ಹೆಗ್ಗಳಿಕೆಗೆ ದೇವೇಂದ್ರ ಫಡಣವೀಸ್ ಭಾಗಿಯಾಗಿದ್ದಾರೆ.
ಹೆಜ್ಜೆ ಗುರುತುಗಳು...
1989ರಲ್ಲಿ 22ನೇ ವಯಸ್ಸಿಗೆ ನಾಗ್ಪುರ ನಗರ ಪಾಲಿಕೆಯ ಕಾರ್ಪೊರೇಟರ್ ಆಗಿ ಆಯ್ಕೆ
1997ರಲ್ಲಿ 27ನೇ ವಯಸ್ಸಿಗೆ ಕಿರಿಯ ಮೇಯರ್ ಆಗಿ ನೇಮಕ
1999–2004ರಲ್ಲಿ ಮೊದಲ ಬಾರಿಗೆ ವಿಧಾನಸಭೆ ಚುನಾವಣೆ ಸ್ಪರ್ಧಿಸಿ ಗೆಲುವು ಸಾಧಿಸಿದರು. ಆ ನಂತರ 2004-2009, 2009-2014, 2014-2019, 2019–2024ರವರೆಗೂ ಶಾಸಕರಾಗಿ ಐದು ಸಲ ಆಯ್ಕೆಯಾದರು. ಇದೀಗ ಮತ್ತೆ ಗೆಲುವು ದಾಖಲಿಸುವ ಮೂಲಕ 6ನೇ ಬಾರಿಗೆ ಶಾಸಕರಾಗಿದ್ದಾರೆ.
2014ರಿಂದ 2019ರವರೆಗೆ ಅವರು ಮುಖ್ಯಮಂತ್ರಿಯಾಗಿದ್ದರು.
2019ರಿಂದ 2022ರವರೆಗೆ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿದ್ದರು.
2022ರಿಂದ ಉಪಮುಖ್ಯಮಂತ್ರಿಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.