ಪುರಿ: 2 ವರ್ಷಗಳ ನಂತರ ಒಡಿಶಾದ ಪುರಿಯಲ್ಲಿರುವಪ್ರಸಿದ್ಧ ಜಗನ್ನಾಥ ಸ್ವಾಮಿ ಮತ್ತಿತರ ದೇವರ ‘ಸ್ನಾನ ಜಾತ್ರೆ’ಯನ್ನು (ವಿಗ್ರಹ ಅಲಂಕಾರ) ಭಕ್ತರು ಕಣ್ತುಂಬಿಕೊಳ್ಳಲು ಅವಕಾಶ ನೀಡಲಾಗಿದೆ. ಜೂ.14ರಂದು 12ನೇ ಶತಮಾನದ ಪುರಾತನ ದೇಗುಲದ ಹೊರಭಾಗದಲ್ಲಿ ಈ ಕಾರ್ಯಕ್ರಮವು ಜರುಗಲಿದೆ.
ಶ್ರೀ ಜಗನ್ನಾಥ ದೇಗುಲ ಆಡಳಿತ ಮಂಡಳಿ ಈ ನಿರ್ಧಾರ ತೆಗೆದುಕೊಂಡಿದೆ. ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷ ‘ಸ್ನಾನ ಜಾತ್ರೆ’ಯಲ್ಲಿಭಕ್ತರು ಪಾಲ್ಗೊಳ್ಳುವುದನ್ನು ನಿರ್ಬಂಧಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.