ಶಬರಿಮಲೆ: ದಕ್ಷಿಣ ಭಾರತದ ಪುಣ್ಯಕ್ಷೇತ್ರಗಳಲ್ಲಿ ಒಂದಾದ ಕೇರಳದ ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇಗುಲದ ಬಾಗಿಲು ಶುಕ್ರವಾರ ತೆರೆದಿದೆ.
ಎರಡು ತಿಂಗಳ ಕಾಲ ಭಕ್ತರಿಗೆ ಅಯ್ಯಪ್ಪ ಸ್ವಾಮಿ ದರ್ಶನ ನೀಡಲಿದ್ದು, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳಿಂದ ಭಕ್ತರು ತಂಡೋಪತಂಡವಾಗಿ ದೇಗುಲಕ್ಕೆ ಭೇಟಿ ನೀಡುತ್ತಿದ್ದಾರೆ.
ನಸುಕಿನ ಜಾವ ಶ್ರದ್ಧಾ ಭಕ್ತಿಯಿಂದ ಹಾಗೂ ಸಾಂಪ್ರಾದಯಿಕ ಆಚರಣೆಗಳ ಮೂಲಕ ಗರ್ಭಗುಡಿಯ ಬಾಗಿಲನ್ನು ಅರ್ಚಕರು ತೆರೆದಿದ್ದಾರೆ.
ಇರುಮುಡಿ ಹೊತ್ತ ಭಕ್ತ ಸಾಗರವು ‘ಸ್ವಾಮಿಯೇ ಶರಣಂ ಅಯಪ್ಪ‘ ಎನ್ನುವ ನಾಮಸ್ಮರಣೆ ಮಾಡುತ್ತಾ ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆಯುತ್ತಿರುವ ದೃಶ್ಯಗಳ ವಿಡಿಯೊವನ್ನು ಎಎನ್‌ಐ ಟ್ವೀಟ್ ಮಾಡಿದೆ.
ಸನ್ನಿಧಾನದಲ್ಲಿರುವ ಅನ್ನದಾನ ಮಂಟಪಮ್‌ನಲ್ಲಿ ಆಯೋಜಿಸಿರುವ ಉಚಿತ ಪ್ರಸಾದ ವಿತರಣೆಗೆ ಸಚಿವ ರಾಧಾಕೃಷ್ಣನ್ ಶುಕ್ರವಾರ ಚಾಲನೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.