ADVERTISEMENT

ಕಾಂಗ್ರೆಸ್‌ ಸೇರ್ಪಡೆ ನಿರ್ಧಾರದಿಂದ ಹಿಂದೆ ಸರಿದ ಗಾಯಕ ಕನ್ಹಯ್ಯ ಮಿತ್ತಲ್

ಪಿಟಿಐ
Published 11 ಸೆಪ್ಟೆಂಬರ್ 2024, 3:29 IST
Last Updated 11 ಸೆಪ್ಟೆಂಬರ್ 2024, 3:29 IST
<div class="paragraphs"><p>ಕನ್ಹಯ್ಯ ಮಿತ್ತಲ್</p></div>

ಕನ್ಹಯ್ಯ ಮಿತ್ತಲ್

   

ಇನ್‌ಸ್ಟಾಗ್ರಾಮ್

ಹರಿದ್ವಾರ: ಖ್ಯಾತ ಭಕ್ತಿ ಗೀತೆಗಳ ಗಾಯಕ ಕನ್ಹಯ್ಯ ಮಿತ್ತಲ್ ಅವರು ಕಾಂಗ್ರೆಸ್‌ಗೆ ಸೇರ್ಪಡೆಯಾಗುವುದರ ಬಗ್ಗೆ ಇತ್ತೀಚೆಗೆ ಹೇಳಿಕೆ ನೀಡಿದ್ದರು. ಆದರೆ ಇದೀಗ ಅವರು ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ ಎಂದು ವರದಿಯಾಗಿದೆ.

ADVERTISEMENT

ಈ ಕುರಿತು ಪ್ರತಿಕ್ರಿಯೆ ನೀಡಿರುವ ಮಿತ್ತಲ್, ಇತ್ತೀಚೆಗೆ ಕಾಂಗ್ರೆಸ್‌ ಸೇರುವ ಬಗ್ಗೆ ಇಂಗಿತ ವ್ಯಕ್ತಪಡಿಸಿದ್ದೆ. ಆದರೆ ಈ ಬಗ್ಗೆ ಸಂತರು, ರಾಜಕಾರಣಿಗಳು, ಆಪ್ತರು ಇದು ಸರಿಯಾದ ನಡೆಯಲ್ಲ ಎಂದು ತಿಳಿಸಿದರು. ಹೀಗಾಗಿ ನಾನು ಕಾಂಗ್ರೆಸ್‌ ಸೇರುವ ನಿರ್ಧಾರದಿಂದ ಹಿಂದೆ ಸರಿದಿದ್ದೇನೆ ಎಂದು ಹೇಳಿದ್ದಾರೆ.

ಮಿತ್ತಲ್ ಅವರ 'ಜೋ ರಾಮ್ ಕೋ ಲಾಯೆ ಹೈ ಹಮ್ ಉಂಕೋ ಲಾಯೇಂಗೆ' ಹಾಡಿನ ಮೂಲಕ ಹೆಚ್ಚು ಪ್ರಸಿದ್ಧರಾದರು.

ಹರಿಯಾಣ ವಿಧಾನಸಭೆ ಚುನವಾಣೆ ಹಿನ್ನೆಲೆ ಸೆಪ್ಟೆಂಬರ್‌ 8ರಂದು ಕಾಂಗ್ರೆಸ್‌ ಸೇರ್ಪಡೆ ಬಗ್ಗೆ ಮಿತ್ತಲ್ ಇಚ್ಛೆಯನ್ನು ವ್ಯಕ್ತಪಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.