ನವದೆಹಲಿ: ಪ್ರಯಾಣಿಕರಿಗೆ ಅಗತ್ಯ ಸೌಕರ್ಯಗಳನ್ನು ಒದಗಿಸುವ ಕುರಿತಾದ ಮಾನದಂಡಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ ಎನ್ನುವ ಕಾರಣಕ್ಕೆ ನಾಗರಿಕ ವಿಮಾನಯಾನ ನಿರ್ದೇಶನಾಲಯ(DGCA) ಏರ್ ಇಂಡಿಯಾಕ್ಕೆ ₹10 ಲಕ್ಷ ದಂಡ ವಿಧಿಸಿದೆ.
ಸದ್ಯ ಈ ಕುರಿತು ಏರ್ ಇಂಡಿಯಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಏರ್ ಇಂಡಿಯಾಕ್ಕೆ ಡಿಜಿಸಿಎ ₹10 ಲಕ್ಷ ದಂಡ ವಿಧಿಸುತ್ತಿರುವುದು ಎರಡನೇ ಬಾರಿಯಾಗಿದೆ.
ದೆಹಲಿ, ಕೊಚ್ಚಿ, ಬೆಂಗಳೂರು ವಿಮಾನ ನಿಲ್ದಾಣಗಳಲ್ಲಿ ಕಳೆದ ಮೇ ನಿಂದ ಸೆಪ್ಟೆಂಬರ್‌ವರೆಗೆ ತಪಾಸಣೆ ನಡೆಸಲಾಗಿದ್ದು, ಪ್ರಯಾಣಿಕರಿಗೆ ನೀಡುವ ಸೌಲಭ್ಯ ಮತ್ತು ಪರಿಹಾರಗಳನ್ನು ಡಿಜಿಸಿಎ ಮಾನದಂಡಗಳಂತೆ ನೀಡುತ್ತಿಲ್ಲ ಎಂದು ಡಿಜಿಸಿಎ ಹೇಳಿದೆ.
ಈ ಕಾರಣದಿಂದಾಗಿ ಪ್ರತಿಕ್ರಿಯೆಯನ್ನು ಕೋರಿ ನವೆಂಬರ್ 3 ರಂದು ಏರ್ ಇಂಡಿಯಾಕ್ಕೆ ಶೋಕಾಸ್ ನೋಟಿಸ್ ಕೂಡ ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.