ADVERTISEMENT

ಸಿಬಿಐ ಕಸ್ಟಡಿಗೆ ಡಿಎಚ್‌‌ಎಫ್‌‌ಎಲ್ ಸೋದರರು‌

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2020, 19:45 IST
Last Updated 26 ಏಪ್ರಿಲ್ 2020, 19:45 IST
ಡಿಎಚ್ಎಫ್ಎಲ್ ಸೋದರರು ಈಗ ಸಿಬಿಐ ಕಸ್ಟಡಿಗೆ
ಡಿಎಚ್ಎಫ್ಎಲ್ ಸೋದರರು ಈಗ ಸಿಬಿಐ ಕಸ್ಟಡಿಗೆ   

ಮುಂಬೈ (ಪಿಟಿಐ): ಅವ್ಯವಹಾರ ನಡೆಸಿದ ಆರೋಪ ಎದುರಿಸುತ್ತಿರುವ, ಡಿಎಚ್‌ಎಫ್‌ಎಲ್‌ನ ಪ್ರವರ್ತಕರಾದ ಕಪಿಲ್‌ ವಧವಾನ್‌ ಹಾಗೂ ಧೀರಜ್‌ ವಧವಾನ್‌ ಅವರನ್ನು ಸಾತಾರಾದಲ್ಲಿ ಸಿಬಿಐ ವಶಕ್ಕೆ ಪಡೆದಿದೆ ಎಂದು ಮಹಾರಾಷ್ಟ್ರ ಗೃಹಸಚಿವ ಅನಿಲ್‌ ದೇಶಮುಖ್‌ ಭಾನುವಾರ ತಿಳಿಸಿದ್ದಾರೆ.

ಹಣ ಅಕ್ರಮ ವರ್ಗಾವಣೆ ಮಾಡಿರುವ ಆರೋಪ ಎದುರಿಸುತ್ತಿರುವ ವಧವಾನ್‌ ಸಹೋದರರು ಫೆಬ್ರುವರಿ 21ರಂದು ಜಾಮೀನು ಪಡೆದಿದ್ದಾರೆ. ಆದರೆ, ಕೋವಿಡ್‌–19 ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಹೇರಲಾಗಿದ್ದರೂ, ಮುಂಬೈನಿಂದ ಅವರು ಮಹಾಬಳೇಶ್ವರ ಗಿರಿಧಾಮಕ್ಕೆ ಕುಟುಂಬ ಸಮೇತ ತೆರಳಿದ್ದರು. ಹೀಗಾಗಿ ವಧವಾನ್‌ ಸಹೋದರರಿಂದ ಲಾಕ್‌ಡೌನ್‌ ನಿಯಮ ಉಲ್ಲಂಘನೆಯಾಗಿದೆ ಎಂಬ ಆರೋಪಗಳು ಕೇಳಿ ಬಂದಿದ್ದವಲ್ಲದೇ, ರಾಜಕೀಯ ಪಕ್ಷಗಳ ಮಧ್ಯೆ ಆರೋಪ–ಪ್ರತ್ಯಾರೋಪಗಳಿಗೂ ಕಾರಣವಾಗಿತ್ತು.

‘ಸಿಬಿಐ ಮನವಿ ಮೇರೆಗೆ, ಆರೋಪಿಗಳನ್ನು ಮುಂಬೈವರೆಗೆ ಕರೆತರಲು ಎಲ್ಲ ನೆರವು ನೀಡಲಾಗಿದೆ. ಅವರ ಬಂಧನಕ್ಕೆ ಸಂಬಂಧಿಸಿದ ಪ್ರಕ್ರಿಯೆಯೂ ನಡೆಯುತ್ತಿದೆ’ ಎಂದು ದೇಶಮುಖ್‌ ಟ್ವೀಟ್‌ ಮಾಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.