ಮುಂಬೈ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹಚರ ಇಕ್ಬಾಲ್ ಮಿರ್ಚಿ ಮತ್ತು ಇತರರು ನಡೆಸಿದ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ದಿವಾನ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ (ಡಿಎಚ್‌ಎಫ್‌ಎಲ್)ನ ಮೂಲ ಪ್ರವರ್ತಕಕಪಿಲ್ ವಧವನ್ ಅವರನ್ನು ಸೋಮವಾರಬಂಧಿಸಿದೆ.
ಅಕ್ರಮ ಹಣಕಾಸು ವರ್ಗಾವಣೆ ತಡೆ ಕಾಯ್ದೆಯಡಿಯಲ್ಲಿ ವಧವನ್ ಅವರನ್ನು ಬಂಧಿಸಿದ್ದು, ತನಿಖೆಗೆ ಅವರು ಸಹಕರಿಸುತ್ತಿಲ್ಲ ಎಂದು ಇ.ಡಿಅಧಿಕಾರಿಗಳು ಆರೋಪಿಸಿದ್ದಾರೆ.
ಇದನ್ನೂ ಓದಿ:ಡಿಎಚ್‌ಎಫ್‌ಎಲ್ ಕಚೇರಿಯಲ್ಲಿ ಇ.ಡಿ. ಶೋಧ
ಮಿರ್ಚಿ ಮುಂಬೈಯಲ್ಲಿ ಹೊಂದಿರುವ ಆಸ್ತಿಗಳವಿರುದ್ಧಜಾರಿ ನಿರ್ದೇಶನಾಲಯ ಕ್ರಮ ಕೈಗೊಂಡಿತ್ತು. ಈ ರೀತಿಯ ಮೂರು ಆಸ್ತಿಗಳನ್ನು ಸನ್‌ಬ್ಲಿಂಕ್‌ಗೆ ಮಾರಾಟ ಮಾಡಲಾಗಿತ್ತು. ಸನ್‌ಬ್ಲಿಂಕ್ ವಧವನ್ಸಹೋದರರಾದ ಕಪಿಲ್ ಮತ್ತು ಧೀರಜ್‌ಗೆ ಸೇರಿದ್ದಾಗಿದೆ.
ಮುಂಬೈನಲ್ಲಿರುವ ದುಬಾರಿ ಆಸ್ತಿಗಳ ಮಾರಾಟ ಮತ್ತು ವ್ಯವಹಾರದಲ್ಲಿ ಅಕ್ರಮ ನಡೆಸಿದ್ದಾರೆ ಎಂಬ ಆರೋಪ ಮಿರ್ಚಿ ಮತ್ತು ಅವರ ಕುಟುಂಬದ ಮೇಲಿದೆ. ಜಾರಿ ನಿರ್ದೇಶನಾಲಯವು ಮಿರ್ಚಿ ವಿರುದ್ಧ ಅಪರಾಧ ಪ್ರಕರಣ ದಾಖಲಿತ್ತು.2013ರಲ್ಲಿ ಲಂಡನ್‌ನಲ್ಲಿ ಮಿರ್ಚಿ ಮರಣ ಹೊಂದಿದ್ದನು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.