ADVERTISEMENT

ಹಿ.ಪ್ರದೇಶ ಉಪಚುನಾವಣೆ: ಪತ್ನಿಯನ್ನು ಕಣಕ್ಕಿಳಿಸುವುದು ಹೈಕಮಾಂಡ್‌ ನಿರ್ಧಾರ- ಸುಖು

ಪಿಟಿಐ
Published 19 ಜೂನ್ 2024, 13:59 IST
Last Updated 19 ಜೂನ್ 2024, 13:59 IST
ಸುಖ್ವಿಂದರ್‌ ಸಿಂಗ್‌ ಸುಖು
ಸುಖ್ವಿಂದರ್‌ ಸಿಂಗ್‌ ಸುಖು   

ಶಿಮ್ಲಾ: ‘ನನ್ನ ಪತ್ನಿ ಚುನಾವಣೆಯಲ್ಲಿ ಸ್ಪರ್ಧಿಸುವುದು ನನಗೆ ಇಷ್ಟವಿಲ್ಲ. ಆದರೆ ಅವರನ್ನು ದೆಹರಾ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಸಲು ಪಕ್ಷದ ಹೈಕಮಾಂಡ್‌ ನಿರ್ಧರಿಸಿದೆ’ ಎಂದು ಕಾಂಗ್ರೆಸ್‌ ಹಿರಿಯ ನಾಯಕ, ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖ್ವಿಂದರ್‌ ಸಿಂಗ್‌ ಸುಖು ಅವರು ಬುಧವಾರ ಹೇಳಿದರು.

ರಾಜ್ಯದ ಉಪಚುನಾವಣೆಯು ಜುಲೈ 10ರಂದು ನಡೆಯಲಿದೆ. ಕಾಂಗ್ರೆಸ್‌ನ ಅಭ್ಯರ್ಥಿ ಪಟ್ಟಿಯಲ್ಲಿ ಸುಖು ಪತ್ನಿ ಕಮಲೇಶ್‌ ಠಾಕೂರ್‌ ಅವರ ಹೆಸರೂ ಇದೆ. ಎರಡು ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಆಯ್ಕೆ ಆಗಿದ್ದ ಮತ್ತು ಈ ಉಪಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸುತ್ತಿರುವ ಹೋಶಿಯಾರ್‌ ಸಿಂಗ್‌ಗೆ ಎದುರಾಳಿಯಾಗಿ ಕಮಲೇಶ್‌ ಸ್ಪರ್ಧಿಸಲಿದ್ದಾರೆ.

‘ಲೋಕಸಭೆ ಚುನಾವಣೆಯಲ್ಲಿ ಕಮಲೇಶ್‌ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್‌ ನಿರ್ಧರಿಸಿತ್ತು. ಒಂದು ಕುಟುಂಬದಿಂದ ಒಬ್ಬರು ಮಾತ್ರ ರಾಜಕಾರಣದಲ್ಲಿ ಇರಬೇಕು ಎಂದು ನಾನು ನಂಬಿದ್ದರಿಂದ ಪಕ್ಷದ ಪ್ರಸ್ತಾವನೆಯನ್ನು ನಾನು ತಿರಸ್ಕರಿಸಿದ್ದೆ. ಆದರೆ ಈ ಬಾರಿ ರಾಜ್ಯದ ರಾಜಕಾರಣವನ್ನು ಗಮನದಲ್ಲಿರಿಸಿಕೊಂಡು ನಾವು ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕಾಗುತ್ತದೆ. ಹೀಗಾಗಿ ಕಮಲೇಶ್‌ ಅವರನ್ನು ಕಣಕ್ಕಿಳಿಸಲು ಒಪ್ಪಿದೆ’ ಎಂದರು.

ADVERTISEMENT
ದೆಹರಾ ನನ್ನದು ಎಂದು ನಾನು ಈ ಮೊದಲು ಹೇಳುತ್ತಿದ್ದೆ. ನನ್ನ ಪತ್ನಿ ನನ್ನನ್ನು ಅಲ್ಲಿ ಪ್ರತಿನಿಧಿಸಲಿದ್ದಾಳೆ
ಸುಖ್ವಿಂದರ್‌ ಸಿಂಗ್‌ ಸುಖು ಹಿಮಾಚಲ ಪ್ರದೇಶ ಮುಖ್ಯಮಂತ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.