ADVERTISEMENT

ಮುಲಾಯಂ ನಿಧನದಿಂದ ತೆರವಾದ ಕ್ಷೇತ್ರದಿಂದ ಸೊಸೆ ಡಿಂಪಲ್‌ ಕಣಕ್ಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ನವೆಂಬರ್ 2022, 8:58 IST
Last Updated 10 ನವೆಂಬರ್ 2022, 8:58 IST
   

ಲಖನೌ: ಮುಲಾಯಂ ಸಿಂಗ್ ಯಾದವ್‌ ಅವರ ನಿಧನದಿಂದ ತೆರವಾಗಿರುವ ಉತ್ತರ ಪ್ರದೇಶದ ಮೇನ್‌ಪುರಿ ಲೋಕಸಭಾ ಕ್ಷೇತ್ರದಿಂದ ಅವರ ಸೊಸೆ, ಅಖಿಲೇಶ್‌ ಯಾದವ್ ಅವರ ಪತ್ನಿ ಡಿಂಪಲ್‌ ಯಾದವ್‌ ಅವರಿಗೆ ಸಮಾಜವಾದಿ ಪಕ್ಷ ಟಿಕೆಟ್‌ ನೀಡಿದೆ.

ಡಿಸೆಂಬರ್‌ 5ಕ್ಕೆ ಈ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಲಿದೆ. ಅದೇ ದಿನದಂದು ವಿವಿಧ ರಾಜ್ಯಗಳ 5 ವಿಧಾನಸಭಾ ಕ್ಷೇತ್ರಗಳಿಗೂ ಉಪ ಚುನಾವಣೆ ನಿಗದಿಯಾಗಿದೆ.

ಗುಜರಾತ್‌ ಹಾಗೂ ಹಿಮಾಚಲ ಪ್ರದೇಶ ಚುನಾಚವಣೆ ಫಲಿತಾಂಶ ಘೋಷಣೆಯಾಗುವ ಡಿಸೆಂಬ‌ರ್ 8 ರಂದೇ ಈ ಕ್ಷೇತ್ರದ ಫಲಿತಾಂಶವೂ ಹೊರ ಬೀಳಲಿದೆ.

ADVERTISEMENT

ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಮುಲಾಯಂ ಸಿಂಗ್‌ ಯಾದವ್ ಅಕ್ಟೋಬರ್‌ 10 ರಂದು ಕೊನೆಯುಸಿರೆಳೆದಿದ್ದರು.

2019ರ ಲೋಕಸಭಾ ಚುನಾವಣೆಯಲ್ಲಿ ಮುಲಾಯಂ ಸಿಂಗ್ ಯಾದವ್ ಅವರು ಇಲ್ಲಿ 94,000 ಮತಗಳ ಅಂತರದಿಂದ ಜಯಗಳಿಸಿದ್ದರು. ಇದು ಅವರ ರಾಜಕೀಯ ಜೀವನದ ಅತಿ ಕಡಿಮೆ ಅಂತರದ ಗೆಲುವಾಗಿದೆ.

2014ರ ಚುನಾವಣೆಯಲ್ಲಿ 3.64 ಲಕ್ಷ ಮತಗಳ ಅಂತರದಿಂದ ಮುಲಾಯಂ ಸಿಂಗ್‌ ಗೆಲುವು ಸಾಧಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.