ADVERTISEMENT

ಯೋಧನಿಗೆ ಮಲಿನ ರಕ್ತ: ₹1.41 ಕೋಟಿ ಪರಿಹಾರ ಠೇವಣಿ ಇರಿಸಿದ ವಾಯುಪಡೆ

ಪಿಟಿಐ
Published 17 ಜುಲೈ 2024, 15:00 IST
Last Updated 17 ಜುಲೈ 2024, 15:00 IST
<div class="paragraphs"><p>ರಕ್ತ</p></div>

ರಕ್ತ

   

ಸಾಂದರ್ಭಿಕ ಚಿತ್ರ

ನವದೆಹಲಿ: ಸೇನಾ ಆಸ್ಪತ್ರೆಯಲ್ಲಿ ನೀಡಿದ್ದ ಮಲಿನ ರಕ್ತದಿಂದ ಎಚ್‌ಐವಿ ಸೋಂಕು ತಗುಲಿದ್ದ ಪ್ರಕರಣದಲ್ಲಿ ಯೋಧರೊಬ್ಬರಿಗೆ ಒಟ್ಟು ₹ 1.59 ಕೋಟಿ ಪರಿಹಾರ ದೊರೆತಿದೆ. ಜಮ್ಮು–ಕಾಶ್ಮೀರದ ಸಾಂಬಾದ ಆಸ್ಪತ್ರೆಯಲ್ಲಿ 2002ರಲ್ಲಿ ಅವಘಡ ನಡೆದಿತ್ತು.

ADVERTISEMENT

ಯೋಧ ಈಗಾಗಲೇ ₹18 ಲಕ್ಷ ಪರಿಹಾರ ಪಡೆದಿದ್ದು, ಬಾಕಿ ಮೊತ್ತ ₹ 1.41 ಕೋಟಿ ಪರಿಹಾರದ ಮೊತ್ತವನ್ನು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಿ ಅವರ ಬಳಿ ಠೇವಣಿ ಇರಿಸಲಾಗಿದೆ ಎಂದು ಭಾರತೀಯ ವಾಯುಪಡೆಯು ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದೆ. 

ಯೋಧ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌, 2023ರ ಸೆಪ್ಟೆಂಬರ್‌ನಲ್ಲಿ ಪರಿಹಾರವಾಗಿ ₹1.5 ಕೋಟಿ ಪಾವತಿಸಬೇಕು ಎಂದು ವಾಯುಪಡೆಗೆ ಆದೇಶಿಸಿತ್ತು.

2001ರ ಡಿಸೆಂಬರ್ 23ರಂದು ಸಂಸತ್ತಿನ ಮೇಲಿನ ಉಗ್ರರ ದಾಳಿ ಕೃತ್ಯದ ಬಳಿಕ ನಡೆದ ‘ಆಪರೇಷನ್ ಪರಾಕ್ರಮ್’ನಲ್ಲಿ ಯೋಧ ಭಾಗಿಯಾಗಿದ್ದರು. ಅನಾರೋಗ್ಯದ ನಿಮಿತ್ತ ಸೇನಾ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ಅವರಿಗೆ ಮಲಿನ ರಕ್ತ ನೀಡಲಾಗಿತ್ತು.

ಇದಕ್ಕೆ ಸಂಬಂಧಿಸಿದ ಆದೇಶವನ್ನು ಮರುಪರಿಶೀಲಿಸಬೇಕು ಎಂಬ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ 2023ರ ಸೆಪ್ಟೆಂಬರ್‌ನಲ್ಲಿ ವಜಾ ಮಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.