ADVERTISEMENT

ದೆಹಲಿಯ ಗಾಳಿ, ನೀರು ಮಾಲಿನ್ಯಕ್ಕೆ ಬಿಜೆಪಿಯ ಕೊಳಕು ರಾಜಕೀಯ ಕಾರಣ: CM ಅತಿಶಿ‌‌‌

ಪಿಟಿಐ
Published 20 ಅಕ್ಟೋಬರ್ 2024, 10:58 IST
Last Updated 20 ಅಕ್ಟೋಬರ್ 2024, 10:58 IST
<div class="paragraphs"><p>ದೆಹಲಿ ಸಿಎಂ ಅತಿಶಿ</p></div>

ದೆಹಲಿ ಸಿಎಂ ಅತಿಶಿ

   

– ಪಿಟಿಐ

ನವದೆಹಲಿ: ದೆಹಲಿಯಲ್ಲಿ ಏರಿಕೆಯಾಗುತ್ತಿರುವ ಗಾಳಿ ಹಾಗೂ ನೀರು ಮಾಲಿನ್ಯಕ್ಕೆ ಬಿಜೆಪಿಯ ಕೊಳಕು ರಾಜಕೀಯವೇ ಕಾರಣ ಎಂದು ಮುಖ್ಯಮಂತ್ರಿ ಅತಿಶಿ ಶನಿವಾರ ಹೇಳಿದ್ದಾರೆ.

ADVERTISEMENT

ಚಳಿಗಾಲ ಆರಂಭವಾಗುತ್ತಲೇ ದೆಹಲಿಯ ವಾಯುಗುಣಮಟ್ಟ ಕುಸಿಯುತ್ತಿದೆ. ವಿಷಕಾರಿ ದಟ್ಟ ನೊರೆ ಯಮುನಾ ನದಿಯ ಮೇಲ್ಭಾಗವನ್ನು ಆವರಿಸಿದೆ.

ಎಎಪಿ ಆಡಳಿತವಿರುವ ‌ಪಂಜಾಬ್‌ನಲ್ಲಿ ಭತ್ತದ ಹುಲ್ಲಿಗೆ ಬೆಂಕಿ ಇಡುವುದರಿಂದ ಮಾಲಿನ್ಯ ಉಂಟಾಗುತ್ತಿದೆ ಎನ್ನುವುದನ್ನು ನಿರಾಕರಿಸಿರುವ ಅವರು, ಬಿಜೆಪಿ ಆಡಳಿತದ ಹರಿಯಾಣದ ಡೀಸೆಲ್ ಬಸ್‌ಗಳು ಹಾಗೂ ಇಟ್ಟಿಗೆ ಸುಡುವುದರಿಂದ ದೆಹಲಿಯ ಗಾಳಿ ಕಲುಷಿತಗೊಳ್ಳುತ್ತಿದೆ ಎಂದು ಅವರು ಹೇಳಿದ್ದಾರೆ.

ದೆಹಲಿ–ಗಾಜಿಯಾಬಾದ್‌ ಗಡಿಯಲ್ಲಿರುವ ಕೌಶಂಬಿ ಬಸ್‌ ಡಿಪೊಗೆ ಉತ್ತರ ಪ್ರದೇಶದ ಸಾವಿರಾರು ಡೀಸೆಲ್ ಬಸ್‌ಗಳು ಬರುತ್ತವೆ. ರಾಷ್ಟ್ರ ರಾಜಧಾನಿ ವಲಯದಲ್ಲಿ ಇಟ್ಟಿಗೆ ಸುಡುವುದು ಹಾಗೂ ಉಷ್ಣ ಸ್ಥಾವರಗಳೂ ದೆಹಲಿಯ ಮಾಲಿನ್ಯಕ್ಕೆ ಕೊಡುಗೆ ನೀಡುತ್ತಿವೆ ಎಂದು ದೂರಿದ್ದಾರೆ.

ಕಾರ್ಖಾನೆಗಳ ಸಂಸ್ಕರಿಸದ ನೀರನ್ನು ಬಿಡುವುದರಿಂದ ಯಮುನಾ ನದಿಯಲ್ಲಿ ನೊರೆ ಉಂಟಾಗುತ್ತಿದೆ. ಹರಿಯಾಣವು ಬಾದ್‌ಶಾಪುರ, ಮಂಗೇಶ್‌ಪುರ ಹಾಗೂ ಇನ್ನಿತರ ಪ್ರದೇಶಗಳಿಂದ ದಿನಕ್ಕೆ 165 ಮಿಲಿಯನ್ ಗ್ಯಾಲನ್‌ಗಳಷ್ಟು ಸಂಸ್ಕರಿಸದ ನೀರನ್ನು ಯುಮುನೆಗೆ ಹರಿಸುತ್ತಿದೆ. ಉತ್ತರ ಪ್ರದೇಶದಿಂದ ನಿತ್ಯ 65 ಮಿಲಿಯನ್ ಗ್ಯಾಲನ್ ಕಲುಷಿತ ನೀರು ಯಮುನೆಯ ಒಡಲು ಸೇರುತ್ತಿದೆ ಎಂದು ಅವರು ಹೇಳಿದ್ದಾರೆ.

‘ನಗರದಲ್ಲಿ ಹೆಚ್ಚುತ್ತಿರುವ ಗಾಳಿ ಹಾಗೂ ನೀರಿನ ಮಾಲಿನ್ಯಕ್ಕೆ ಬಿಜೆಪಿಯ ಕೊಳಕು ರಾಜಕೀಯವೇ ಕಾರಣ. ಆದರೆ ಅರವಿಂದ ಕೇಜ್ರಿವಾಲ್ ನೇತೃತ್ವದ ಎಎ‍ಪಿ ಸರ್ಕಾರ ಜನರಿಗೆ ಸಹಾಯ ಮಾಡಲು ಕಟಿಬದ್ಧವಾಗಿದೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.