ನವದೆಹಲಿ: ಮಾನವೀಯ ನೆಲೆಯಲ್ಲಿ ಅಫ್ಗಾನಿಸ್ತಾನಕ್ಕೆ ಆಹಾರ ನೆರವು ನೀಡುವ ಕುರಿತು ವಿಶ್ವಸಂಸ್ಥೆಯ ವಿಶ್ವ ಆಹಾರ ಕಾರ್ಯಕ್ರಮ (ಡಬ್ಲ್ಯುಎಫ್‌ಪಿ) ಮತ್ತು ಭಾರತದ ನಡುವೆ ಚರ್ಚೆ ನಡೆದಿದೆ ಎಂದು ಡಬ್ಲ್ಯುಎಫ್‌ಪಿಮುಖ್ಯಸ್ಥೆ ಸೆಸಿಲಿಯಾ ಗಾರ್ಜೋನ್ ಅವರು ತಿಳಿಸಿದರು.
ಯುದ್ಧ ಬಾಧಿತ ಅಫ್ಗಾನಿಸ್ತಾನದಲ್ಲಿ ಆಹಾರ ಬಿಕ್ಕಟ್ಟು ಉಂಟಾಗಿದೆ. ಕೆಲವು ಸಂಕೀರ್ಣ ಕಾರಣಗಳಿಂದಾಗಿ ಆ ದೇಶದಲ್ಲಿ ಕುಟುಂಬಗಳು ತೀವ್ರವಾದ ಆಹಾರ ಬಿಕ್ಕಟ್ಟು ಎದುರಿಸುತ್ತಿವೆ’ ಎಂದು ಅವರು ಹೇಳಿದ್ದಾರೆ.
ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದಅವರು, ಭಾರತ ಸೇರಿದಂತೆ ಈಗಾಗಲೇ ಜಗತ್ತಿನ ಎಲ್ಲ ರಾಷ್ಟ್ರಗಳು ತಮ್ಮ ಪರಿಮಿತಿಯಲ್ಲಿ ಯುದ್ಧಪೀಡಿತ ಅಫ್ಗಾನಿಸ್ತಾನದ ಕುಟುಂಬಗಳಿಗೆ ನೆರವು ನೀಡುತ್ತಿವೆ’ ಎಂದು ಅಭಿಪ್ರಾಯಪಟ್ಟರು.
’ಆಹಾರದ ಕೊರತೆ ಹಿನ್ನೆಲೆಯಲ್ಲಿ ಕುಟುಂಬಗಳಿಗೆ ಆಹಾರ, ಭದ್ರತೆ ಮತ್ತು ಸ್ಥಿರತೆಯನ್ನು ಅರಸುತ್ತಾ ಮನೆ ತೊರೆಯುವವರ ಸಂಖ್ಯೆಅಫ್ಗಾನಿಸ್ತಾನದಲ್ಲಿ ಹೆಚ್ಚುತ್ತಿದೆ. ಇದರಿಂದಾಗಿ, ಆ ದೇಶದಲ್ಲಿ ದೊಡ್ಡ ಪ್ರಮಾಣದ ಮಾನವೀಯ ಬಿಕ್ಕಟ್ಟು ಉದ್ಭವವಾಗಿದೆ’ ಎಂದು ಗಾರ್ಜೊನ್ ಹೇಳಿದ್ದಾರೆ.
ಅಫ್ಗಾನಿಸ್ತಾನಕ್ಕೆ ಆಹಾರದ ನೆರವು ನೀಡುವ ಕುರಿತು ಡಬ್ಲ್ಯುಎಫ್‌ಪಿ ಭಾರತಕ್ಕೆ ಪ್ರಸ್ತಾವ ಸಲ್ಲಿಸಿದೆಯೇ ಎಂಬ ಪ್ರಶ್ನೆಗೆ ಅವರು, ’ಈ ಸಂಬಂಧ ಭಾರತ ಸರ್ಕಾರ ಮತ್ತು ಡಬ್ಲ್ಯುಎಫ್‌ಪಿ ನಡುವೆ ಸಕಾರಾತ್ಮಕ ಚರ್ಚೆ ನಡೆಯುತ್ತಿದೆ. ಶೀಘ್ರವೇ ಇವೆಲ್ಲ ಇತ್ಯರ್ಥಗೊಳ್ಳುವ ಸಾಧ್ಯತೆ ಇದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.