ನವದೆಹಲಿ (ಪಿಟಿಐ): ಆಸ್ಪತ್ರೆಯಲ್ಲಿ ಹರಡಬಹುದಂತಾದ ಸೋಂಕುಗಳನ್ನು ತಡೆಯುವ ‘ಸೋಂಕು ನಿರೋಧಕ ಬಟ್ಟೆ’ಯನ್ನು ದೆಹಲಿಯ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಅಭಿವೃದ್ಧಿಪಡಿಸಿದೆ.
ವಿಶ್ವದಾದ್ಯಂತ ಕೊರೊನಾ ವೈರಸ್ ಸೋಂಕು ತೀವ್ರವಾಗಿವ್ಯಾಪಿಸುತ್ತಿರುವ ಸಂದರ್ಭ ದಲ್ಲೇ ಐಐಟಿ ದೆಹಲಿಯಲ್ಲಿ ಇರುವ ನವೋದ್ಯಮ ‘ಫಬಯೋಸಿಸ್ ಇನೊವೇಷನ್ಸ್’ ಇದನ್ನುಅಭಿವೃದ್ಧಿಪಡಿಸಿದೆ.ಕೇಂದ್ರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಬೆಂಬಲದೊಂದಿಗೆ ಒಂದು ವರ್ಷದಿಂದ ಈ ಯೋಜನೆಯಲ್ಲಿ ತೊಡಗಿಸಿಕೊಂಡಿದೆ.
ಆರೋಗ್ಯ ಮತ್ತು ಕುಟುಂಬ ಅಭಿವೃದ್ಧಿ ಸಚಿವಾಲಯದ ಮಾಹಿತಿಯಂತೆ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ
ಆಸ್ಪತ್ರೆಗೆ ದಾಖಲಾದ 100 ರೋಗಿಗಳಲ್ಲಿ 10 ರೋಗಿಗಳು ಆಸ್ಪತ್ರೆಯಲ್ಲಿ ಮತ್ತಷ್ಟು ಸೋಂಕಿಗೆ ಒಳಗಾಗುತ್ತಾರೆ. ಹತ್ತಿ ಬಟ್ಟೆಯನ್ನು ಉಪಯೋಗಿಸಿಕೊಂಡು ಸ್ವದೇಶಿ ತಂತ್ರಜ್ಞಾನ ಬಳಸಿ ಸೋಂಕು ನಿರೋಧಕ ಬಟ್ಟೆಯನ್ನು ಅಭಿವೃದ್ಧಿಪಡಿಸಲಾಗಿದೆ.
‘ಹಲವು ಬಾರಿ ಈ ಬಟ್ಟೆಯನ್ನು ಒಗೆದರೂ, ಇದಲ್ಲಿರುವ ಸೋಂಕು ನಿರೋಧಕ ಶಕ್ತಿ ಕುಂದುವುದಿಲ್ಲ. ಇದೇ ಬಟ್ಟೆಯ ವಿಶೇಷ. ಇದನ್ನು ಬೆಡ್‌ಶೀಟ್ ಆಗಿ. ರೋಗಿಗಳು, ವೈದ್ಯರು ಹಾಗೂ ನರ್ಸ್‌ಗಳ ಸಮವಸ್ತ್ರವಾಗಿ, ಆಸ್ಪತ್ರೆಯ ಕಿಟಕಿಗಳಿಗೂ ಇದನ್ನು ಬಳಸಬಹುದು. ಇದು ವಿಷರಹಿತವಾಗಿದ್ದು, ಕಡಿಮೆ ದರದಲ್ಲಿ ಲಭ್ಯವಾಗಲಿದೆ’ ಎಂದು ಜವಳಿ ಹಾಗೂ ಫೈಬರ್ ಎಂಜಿನಿಯರಿಂಗ್ ವಿಭಾಗದ ಪ್ರೊ.ಸಾಮ್ರಾಟ್ ಮುಖೋಪಾಧ್ಯಾಯ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.