ADVERTISEMENT

ಬಿಹಾರದ ಸರನ್‌ ಸರ್ಕಾರಿ ಕಚೇರಿಗಳಲ್ಲಿ ಜೀನ್ಸ್ ಧರಿಸದಂತೆ ಕೋರ್ಟ್ ಆದೇಶ

ಐಎಎನ್ಎಸ್
Published 19 ಏಪ್ರಿಲ್ 2023, 2:54 IST
Last Updated 19 ಏಪ್ರಿಲ್ 2023, 2:54 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪಟ್ನಾ: ಬಿಹಾರದ ಸರನ್‌ ಜಿಲ್ಲೆಯ ಎಲ್ಲಾ ಸರ್ಕಾರಿ ನೌಕರರು ಜೀನ್ಸ್ ಧರಿಸಿ ಕಚೇರಿಗೆ ಬರುವುದನ್ನು ನಿರ್ಬಂಧಿಸಲಾಗಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಆದೇಶ ನೀಡಿದೆ.

ಕಚೇರಿಗಳಲ್ಲಿ ಉದ್ಯೋಗಿಗಳನ್ನು ಸುಲಭವಾಗಿ ಪತ್ತೆ ಹಚ್ಚಲು, ಗುರುತಿನ ಚೀಟಿಗಳನ್ನು ಧರಿಸಬೇಕು. ಔಪಚಾರಿಕ ಉಡುಗೆಯನ್ನು ಧರಿಸುವ ಜೊತೆಗೆ ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ ಕೆಲಸದ ಸಮಯದಲ್ಲಿ ಕಚೇರಿಗಳಲ್ಲಿಯೇ ಇರಲು ತಿಳಿಸಿದೆ.

ಸರ್ಕಾರಿ ಕಚೇರಿಗಳಲ್ಲಿ ಕೆಲಸದ ಸಂಸ್ಕೃತಿಯನ್ನು ಬದಲಾಯಿಸುವುದು ಆಚರಣೆಯ ಕಲ್ಪನೆಯಲ್ಲ.

ADVERTISEMENT

ಈ ಸಂಬಂಧ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರು ನಿರ್ದಿಷ್ಟ ಇಲಾಖೆಗಳ ದಿಢೀರ್‌ ತಪಾಸಣೆಗಳನ್ನು ಕೈಗೊಳ್ಳಬಹುದು. ವಿಡಿಯೊ ಕಾನ್ಫರೆನ್ಸ್ ಅಥವಾ ವಿಡಿಯೊ ಕರೆ ಮೂಲಕ ಪರಿಶೀಲನೆ ನಡೆಸಬಹುದು. ಹೊಸ ಮಾರ್ಗಸೂಚಿಗಳನ್ನು ಅದರಲ್ಲೂ ವಿಶೇಷವಾಗಿ ಡ್ರೆಸ್ ಕೋಡ್ ಅನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ಉದ್ಯೋಗಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಈ ಆದೇಶವನ್ನ ಉಲ್ಲಂಘಿಸಿದವರಿಗೆ ದಂಡ ವಿಧಿಸಲಾಗುವುದು ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.