ಚೆನ್ನೈ: ತಮಿಳು ಸೇರಿದಂತೆ ಸಂವಿಧಾನದ 8ನೇ ಪರಿಚ್ಛೇದದಡಿ ಮಾನ್ಯತೆ ನೀಡಲಾಗಿರುವ ಎಲ್ಲ ಭಾಷೆಗಳಿಗೆ ಕೇಂದ್ರದ ಸರ್ಕಾರದ ಅಧಿಕೃತ ಭಾಷೆ ಸ್ಥಾನಮಾನ ಪಡೆಯುವ ನಿಟ್ಟಿನಲ್ಲಿ ತಮ್ಮ ಸರ್ಕಾರ ಪ್ರಯತ್ನಿಸಲಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ವಾಲಿನ್ ಭಾನುವಾರ ಹೇಳಿದರು.
‘2004ರ ಜೂನ್ 6ರಂದು ಕೇಂದ್ರ ಸರ್ಕಾರ ತಮಿಳಿಗೆ ಶಾಸ್ತ್ರೀಯ ಭಾಷೆ ಸ್ಥಾನಮಾನ ನೀಡಿರುವುದನ್ನು ಘೋಷಿಸಿತ್ತು. ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ಅವರ ಅವಿರತ ಶ್ರಮದಿಂದಾಗಿ ಈ ಕಾರ್ಯವಾಯಿತು. ತಮಿಳು ಭಾಷೆಯ ಬೆಳವಣಿಗೆ ಡಿಎಂಕೆ ನೇತೃತ್ವದ ಸರ್ಕಾರ ಶ್ರಮಿಸುವುದು’ ಎಂದು ಹೇಳಿದರು.
ಸಂವಿಧಾನದ 343ನೇ ವಿಧಿ ಪ್ರಕಾರ, ದೇವನಾಗರಿ ಲಿಪಿಯನ್ನು ಬಳಸುವ ಹಿಂದಿಯನ್ನು ಕೇಂದ್ರ ಸರ್ಕಾರದ ಅಧಿಕೃತ ಭಾಷೆ ಎಂದು ಅಂಗೀಕರಿಸಲಾಗಿದೆ. ಸಂವಿಧಾನದ 8ನೇ ಪರಿಚ್ಛೇದದಲ್ಲಿ ಹಿಂದಿ ಸೇರಿದಂತೆ 22 ಭಾಷೆಗಳಿಗೆ ಮಾನ್ಯತೆ ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.