ಚೆನ್ನೈ: ಕೇಂದ್ರ ಸರ್ಕಾರವು ಬಜೆಟ್‌ನಲ್ಲಿ ತಮಿಳುನಾಡಿಗೆ ಅನ್ಯಾಯ ಮಾಡಿದೆ ಎಂದು ದೂರಿ ಡಿಎಂಕೆ ಕಾರ್ಯಕರ್ತರು, ರಾಜ್ಯದಾದ್ಯಂತ ಶನಿವಾರ ಪ್ರತಿಭಟನೆ ನಡೆಸಿದರು.
ಮೆಟ್ರೊ ರೈಲು ಎರಡನೇ ಹಂತ ಸೇರಿದಂತೆ ತಮಿಳುನಾಡಿನ ವಿವಿಧ ಯೋಜನೆಗಳಿಗೆ ಅನುದಾನ ನೀಡದಿರುವುದನ್ನು ಪ್ರಶ್ನಿಸಿದ ಸಂಸದರು ಹಾಗೂ ಪಕ್ಷದ ಮುಖಂಡರು ಕೇಂದ್ರದ ನಿಲುವಿನ ವಿರುದ್ಧ ಕಿಡಿಕಾರಿದರು. ಧಿಕ್ಕಾರದ ಘೋಷಣೆಗಳನ್ನು ಹಾಕಿದರು.
ತಮಿಳುನಾಡಿನ ತೆರಿಗೆ ಎಲ್ಲಿಗೆ ಹೋಯಿತು? ಕೇಂದ್ರದಿಂದ ತಮಿಳುನಾಡಿಗೆ ದೊರೆಯುತ್ತಿರುವುದು ಶೂನ್ಯ ಎನ್ನುವ ಪ್ರತಿಭಟನಾ ಬರಹವುಳ್ಳ ಫಲಕಗಳನ್ನು ಥೇಣಿಯಲ್ಲಿ ನಡೆದ ಪ್ರತಿಭನೆಯಲ್ಲಿ ಕಾರ್ಯಕರ್ತರು ಪ್ರದರ್ಶಿಸಿದರು.
ಡಿಎಂಕೆ ಸಂಸದರಾದ ಟಿ.ಆರ್. ಬಾಲು, ಕನಿಮೊಳಿ, ದಯಾನಿಧಿ ಮಾರನ್ ಅವರು ರಾಜ್ಯದ ವಿವಿಧೆಡೆ ನಡೆದ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.