ಚೆನ್ನೈ: ಫೆಬ್ರುವರಿ 19 ರಂದು ತಮಿಳುನಾಡಿನ ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಡಿಎಂಕೆ ನೇತೃತ್ವದ ‘ಜಾತ್ಯತೀತ ಪ್ರಗತಿಪರ ಮೈತ್ರಿಕೂಟ’ ಭರ್ಜರಿ ಗೆಲುವಿನತ್ತ ಸಾಗಿದೆ. ಮಧ್ಯಾಹ್ನ 1 ಗಂಟೆ ವರೆಗಿನ ಫಲಿತಾಂಶದ ಪ್ರಕಾರ, ಡಿಎಂಕೆ ಪಕ್ಷವೊಂದೇ ಏಕಾಂಗಿಯಾಗಿ 213 ಮುನ್ಸಿಪಲ್ ಕಾರ್ಪೊರೇಷನ್ ವಾರ್ಡ್‌ಗಳು, 960 ಪುರಸಭೆ ವಾರ್ಡ್‌ಗಳು, 3,272 ಪಟ್ಟಣ ಪಂಚಾಯಿತಿ ಸ್ಥಾನಗಳನ್ನು ಗೆದ್ದುಕೊಂಡಿದೆ.
ಎಐಎಡಿಎಂಕೆ 38 ಮುನ್ಸಿಪಲ್ ಕಾರ್ಪೊರೇಷನ್ ವಾರ್ಡ್‌ಗಳು,, 262 ಪುರಸಭೆ ವಾರ್ಡ್‌ಗಳು, 915 ಪಟ್ಟಣ ಪಂಚಾಯಿತಿ ವಾರ್ಡ್‌ಗಳನ್ನು ಗೆದ್ದಿದೆ.
ಎಐಎಡಿಎಂಕೆ ಭದ್ರಕೋಟೆ ಎಂದು ಪರಿಗಣಿಸಲಾಗಿರುವ ಪಶ್ಚಿಮ ತಮಿಳುನಾಡಿಗೂ ಆಡಳಿತಾರೂಢ ಡಿಎಂಕೆ ನುಗ್ಗಿದೆ. ಡಿಎಂಕೆ ಈಗಾಗಲೇ ಕೊಯಮತ್ತೂರು ಮುನ್ಸಿಪಲ್ ಕಾರ್ಪೊರೇಷನ್‌ನಲ್ಲಿ 6 ಸದಸ್ಯ ಸ್ಥಾನಗಳನ್ನು ಮತ್ತು ಈರೋಡ್ ಕಾರ್ಪೊರೇಷನ್‌ನ 18 ವಾರ್ಡ್‌ಗಳನ್ನು ಗೆದ್ದುಕೊಂಡಿದೆ. ಗ್ರೇಟರ್ ಚೆನ್ನೈ ಕಾರ್ಪೊರೇಷನ್‌ನಲ್ಲೂ ಡಿಎಂಕೆ ಅಭ್ಯರ್ಥಿಗಳು ಈಗಾಗಲೇ 36 ಸ್ಥಾನಗಳಲ್ಲಿ ಜಯಗಳಿಸಿದ್ದಾರೆ.
ಈ ವರೆಗಿನ ಮಾಹಿತಿ ಪ್ರಕಾರ, ಕಾಂಗ್ರೆಸ್ 22 ಕಾರ್ಪೊರೇಷನ್ ವಾರ್ಡ್‌ಗಳು, 64 ಪುರಸಭೆ ವಾರ್ಡ್‌ಗಳು ಮತ್ತು 225 ಪಟ್ಟಣ ಪಂಚಾಯಿತಿ ಸ್ಥಾನಗಳಲ್ಲಿ ಗೆದ್ದಿದೆ.
ಇನ್ನೊಂದೆಡೆ, ಬಿಜೆಪಿ ಇದುವರೆಗೆ 1 ಮಹಾನಗರ ಪಾಲಿಕೆ ಸ್ಥಾನ, 24 ಪುರಸಭೆ ವಾರ್ಡ್ ಮತ್ತು 102 ಪಟ್ಟಣ ಪಂಚಾಯಿತಿ ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.