ನವದೆಹಲಿ: ಪ್ರಸಕ್ತ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಹೊಸ ರೈಲ್ವೆ ಮಾರ್ಗಗಳನ್ನು ನಿರ್ಮಿಸಲು ದಕ್ಷಿಣ ರೈಲ್ವೆಗೆ ಕೇವಲ ₹ 59 ಕೋಟಿ ಮೀಸಲಿರಿಸಿ, ಉತ್ತರ ರೈಲ್ವೆಗೆ ₹ 13,200 ಕೋಟಿ ಕೊಟ್ಟಿರುವ ಬಗ್ಗೆ ತಮಿಳುನಾಡು ಸಂಸದೆ ಕನಿಮೋಳಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಕೇಂದ್ರದ ಅನುದಾನದಲ್ಲಿ ಈ ರೀತಿಯಅಸಮಾನತೆ ಮತ್ತು ವ್ಯತ್ಯಾಸ ಏಕೆ? ಎಂದು ಕೇಂದ್ರ ರೈಲ್ವೆ ಸಚಿವರನ್ನು ಬುಧವಾರ ಲೋಕಸಭೆಯಲ್ಲಿ ಡಿಎಂಕೆ ಸಂಸದೆ ಪ್ರಶ್ನಿಸಿದರು.
ಇದು 'ಏಕ ಭಾರತ' ಎಂದುಕೊಂಡಿದ್ದೇನೆ. ಏಕ ಭಾರತದ ಬಗ್ಗೆ ಆಗಾಗ ಹೇಳುತ್ತಲೇ ಇರುತ್ತೀರಿ. ರೈಲ್ವೆ ಕೂಡ ಏಕ ಭಾರತ ಎಂಬುದನ್ನು ಅರ್ಥೈಸಿಕೊಳ್ಳಬೇಕು ಎಂದು ಆಗ್ರಹಿಸಿದರು.
ಕೇಂದ್ರ ಸರ್ಕಾರವು ದಕ್ಷಿಣ ಭಾಗವನ್ನು ಹೇಗೆ ನಡೆಸಿಕೊಳ್ಳುತ್ತಿದೆ ಎಂಬುದಕ್ಕೆ ಇದು ಉದಾಹರಣೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕನಿಮೋಳಿ ಅವರ ಭಾಷಣದ ವಿಡಿಯೊಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಂಚಿಕೆಯಾಗುತ್ತಿದೆ.
ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ಹಿಂದಿಯಲ್ಲಿ ಉತ್ತರಿಸಲು ಮುಂದಾದಾಗ ಆಕ್ಷೇಪಿಸಿದ ಕನಿಮೋಳಿ, ಇಂಗ್ಲಿಷ್‌ನಲ್ಲಿ ಪ್ರತಿಕ್ರಿಯಿಸುವಂತೆ ಕೋರಿದ ವಿಡಿಯೊ ಕೂಡ ವೈರಲ್ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.