ದೆಹಲಿ: ದೆಹಲಿಯಲ್ಲಿ ಮೆಟ್ರೊ ಪ್ರಯಾಣಕ್ಕೆ ಹಾಗೂ ಸಿಟಿ ಬಸ್ ಪ್ರಯಾಣಕ್ಕೆ ಟಿಕೆಟ್ ಪಡೆದುಕೊಳ್ಳಲು ಒಂದೇ ಆ್ಯಪ್ ಅನ್ನು ದೆಹಲಿ ಮೆಟ್ರೊ ರೈಲು ನಿಗಮ (DMRC) ಪರಿಚಯಿಸಿದೆ.
One Delhi App ಎಂಬ ಹೊಸ ಆ್ಯಪ್ ಅನ್ನು ಪರಿಚಯಿಸಲಾಗಿದ್ದು ಇದರಿಂದ ಪ್ರಯಾಣಿಕರು ಮೆಟ್ರೊ ಹಾಗೂ ಬಸ್ ಪ್ರಯಾಣಕ್ಕೆ ಕ್ಯೂಆರ್ ಟಿಕೆಟ್‌ಗಳನ್ನು ಖರೀದಿಸಬಹುದು ಎಂದು ನಿಗಮದ ಪ್ರಧಾನ ಕಾರ್ಯನಿರ್ವಾಹ ನಿರ್ದೇಶಕ ಅಂಜು ದಯಾಳ್ ತಿಳಿಸಿದ್ದಾರೆ.
ದೆಹಲಿ ಇಂದ್ರಪ್ರಸ್ತ ಐಐಐಟಿಯಿಂದ ಈ ಆ್ಯಪ್ ಅನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಮೊದಲು DMRC Saarthi ಆ್ಯಪ್‌ನಲ್ಲಿ ಕೇವಲ ಮೆಟ್ರೊ ಟೆಕೆಟ್‌ಗಳನ್ನು ತೆಗೆದುಕೊಳ್ಳಬಹುದಿತ್ತು. ಇದರಿಂದ ಪ್ರಯಾಣಿಕರು ಅನಿವಾರ್ಯವಾಗಿ ಎರಡ್ಮೂರು ಆ್ಯಪ್‌ಗಳನ್ನು ಬಳಸಬೇಕಿತ್ತು.ದೆಹಲಿ ಸಾರಿಗೆ ಇಲಾಖೆ ಮಾಲಿಕತ್ವದಲ್ಲಿ ಡಿಟಿಸಿ ಸಹಕಾರದಿಂದ One Delhi App ಅನ್ನು ಪರಿಚಯಿಸಲಾಗಿದೆ. ಇದು ತುಂಬಾ ಗ್ರಾಹಕ ಸ್ನೇಹಿಯಾಗಿದೆ ಎಂದು ಹೇಳಿದ್ದಾರೆ.
ಹೊಸ ಆ್ಯಪ್‌ಗೆ ಸದ್ಯ 5 ಲಕ್ಷ ಬಳಕೆದಾರರಿದ್ದು ಪ್ರತಿದಿನ 1.5 ಲಕ್ಷಕ್ಕೂ ಅಧಿಕ ಮೆಟ್ರೊ ಟಿಕೆಟ್‌ಗಳು ವಿತರಣೆಯಾಗುತ್ತಿವೆ ಎಂದು ಅವರು ವಿವರಿಸಿದ್ದಾರೆ.
ಈ ಆ್ಯಪ್‌ನಲ್ಲಿ ಕೇವಲ ಟಿಕೆಟ್‌ಗಳು ಅಲ್ಲದೇ, ಪ್ರಯಾಣ ಮಾರ್ಗ, ರೈಲು– ಬಸ್‌ಗಳ ವೇಳಾಪಟ್ಟಿ, ಸೌಕರ್ಯಗಳ ಮಾಹಿತಿ, ಸಹಾಯವಾಣಿಗಳ ಸೌಲಭ್ಯ, ಸುಲಭ ಪಾವತಿ ವಿಧಾನ ಇತರೆ ಅನುಕೂಲಗಳನ್ನು ಒಂದೇ ಕಡೆ ಒದಗಿಸಲಾಗಿದೆ. ಡಿಎಂಆರ್‌ಸಿಯಲ್ಲಿ ಇದೊಂದು ಹೊಸ ಮೈಲಿಗಲ್ಲು ಎಂದು ದಯಾಳ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.