ADVERTISEMENT

ಗ್ರೆನೇಡ್‌ ದಾಳಿ| ಉಗ್ರರನ್ನು ಶಿಕ್ಷಿಸಲು ಏನು ಬೇಕಾದರೂ ಮಾಡಿ: LG ಮನೋಜ್ ಸಿನ್ಹಾ

ಪಿಟಿಐ
Published 3 ನವೆಂಬರ್ 2024, 13:44 IST
Last Updated 3 ನವೆಂಬರ್ 2024, 13:44 IST
<div class="paragraphs"><p>ಲೆಫ್ಟಿನೆಂಟ್ ಗವರ್ನರ್‌ ಮನೋಜ್‌ ಸಿನ್ಹಾ</p></div>

ಲೆಫ್ಟಿನೆಂಟ್ ಗವರ್ನರ್‌ ಮನೋಜ್‌ ಸಿನ್ಹಾ

   

ಶ್ರೀನಗರ: ಉಗ್ರರನ್ನು ಮಟ್ಟಹಾಕಲು ಯಾವ ಶಿಕ್ಷೆ ನೀಡಬಹುದೋ ಅದನ್ನು ಮಾಡಿ ಎಂದು ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್‌ ಮನೋಜ್‌ ಸಿನ್ಹಾ ಭಾನುವಾರ ಹೇಳಿದ್ದಾರೆ.

ಶ್ರೀನಗರದ ಜನನಿಬಿಡ ಮಾರುಕಟ್ಟೆಯ ಬಳಿ ಉಗ್ರರು ನಡೆಸಿದ ಗ್ರೆನೇಡ್‌ ದಾಳಿಯಲ್ಲಿ 10ಕ್ಕೂ ಹೆಚ್ಚು ನಾಗರಿಕರು ಗಾಯಗೊಂಡಿದ್ದಾರೆ. ಘಟನೆಯ ಬಳಿಕ ಡಿಜಿಪಿ ಸೇರಿದಂತೆ ಭದ್ರತಾ ಪಡೆಗಳ ಹಿರಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ ಸಿನ್ಹಾ, ‘ಭಯೋತ್ಪಾದಕರು ಮತ್ತು ಅವರ ಸಹಚರರನ್ನು ಶಿಕ್ಷಿಸಲು ನಿಮಗೆ ಸಂಪೂರ್ಣ ಅಧಿಕಾರವಿದೆ, ಯಾವೊಬ್ಬ ಉಗ್ರನನ್ನು ಬಿಡಬೇಡಿ, ಈ ಕಾರ್ಯಾಚರಣೆಯನ್ನು ಪೂರ್ಣಗೊಳಿಸಿ’ ಎಂದು ಸೂಚನೆ ನೀಡಿದ್ದಾರೆ.

ADVERTISEMENT

ಉಗ್ರರು ನಾಗರಿಕರ ಮೇಲೆ ದಾಳಿ ನಡೆಸಿದರೆ ಅದಕ್ಕೆ ಭಾರಿ ಪ್ರಮಾಣದ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.