ಭುವನೇಶ್ವರ: ವಲಸೆ ಹಕ್ಕಿಗಳ ನೆಚ್ಚಿನ ತಾಣವಾಗಿರುವ ಒಡಿಶಾದ ಚಿಲಿಕಾ ಸರೋವರವು ಇದೀಗಾ ಅಪರೂಪದ ಇರ್ರಾವಾಡಿ ಡಾಲ್ಫಿನ್‌ಗಳಿಗೂ ಸುರಕ್ಷಿತ ತಾಣವಾಗಿ ಮಾರ್ಪಟ್ಟಿದೆ.
‘ಚಿಲಿಕಾ ಅಭಿವೃದ್ಧಿ ಪ್ರಾಧಿಕಾರವು (ಸಿಡಿಎ) ಸರೋವರದಲ್ಲಿರುವ ಜೀವವೈವಿಧ್ಯದ ಬಗ್ಗೆ ವಾರ್ಷಿಕ ಸಮೀಕ್ಷೆ ನಡೆಸಿತ್ತು. ಈ ಸಮೀಕ್ಷೆಯಲ್ಲಿ ಚಿಲಿಕಾ ಸರೋವರದಲ್ಲಿ ಡಾಲ್ಫಿನ್‌ಗಳ ಸಂಖ್ಯೆ ಹೆಚ್ಚಳವಾಗಿರುವುದು ತಿಳಿದು ಬಂದಿದೆ. 2019ರಲ್ಲಿ ಈ ಸರೋವರದಲ್ಲಿ 150 ಡಾಲ್ಫಿನ್‌ಗಳಿದ್ದವು. ಆದರೆ 2020ರಲ್ಲಿ ಇವುಗಳ ಸಂಖ್ಯೆ 156ಕ್ಕೆ ಏರಿಕೆಯಾಗಿದೆ’ ಎಂದು ಅಧಿಕಾರಿಗಳು ತಿಳಿಸಿದರು.
‘ಚಿಲಿಕಾ ಸರೋವರದಲ್ಲಿ ಇರ‍್ರಾವಾಡಿ ಪ್ರಭೇದದ ಡಾಲ್ಫಿನ್‌ಗಳು ಕಂಡುಬರುತ್ತವೆ. ಏಷ್ಯಾದಲ್ಲಿ ಈ ಪ್ರಭೇದದ ಡಾಲ್ಫಿನ್‌ಗಳು ಪ್ರಸ್ತುತ ಇಂಡೊನೇಷ್ಯಾದಲ್ಲಿಯೂ ಕಂಡು ಬರುತ್ತವೆ’ ಎಂದು ಸಿಡಿಎ ಹೇಳಿಕೆಯಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.