ಚೆನ್ನೈ: ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ತಮಿಳುನಾಡನ್ನು ಕಡೆಗಣಿಸಿದೆ ಎಂದು ಆರೋಪಿಸಿರುವ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ‘ಚುನಾವಣೆಯಲ್ಲಿ ಬಿಜೆಪಿಯನ್ನು ತಿರಸ್ಕರಿಸಿದ್ದ ರಾಜ್ಯಗಳ ಮೇಲೆ ಸೇಡುತೀರಿಸಿಕೊಳ್ಳುವ ಧೋರಣೆ ಬೇಡ’ ಎಂದು ಆಗ್ರಹಪಡಿಸಿದ್ದಾರೆ.
‘ಸಂಸತ್ತಿನಲ್ಲಿ ಮಂಡಿಸಿದ ಬಜೆಟ್ ನಿಮ್ಮ ಸರ್ಕಾರವನ್ನು ರಕ್ಷಿಸಬಹುದು, ದೇಶವನ್ನಲ್ಲ’ ಎಂದು ಜಾಲತಾಣದಲ್ಲಿ ಮಾಡಿರುವ ಪೋಸ್ಟ್‌ನಲ್ಲಿ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.
ಚುನಾವಣೆ ಮುಗಿದಿರುವ ಕಾರಣ ಎಲ್ಲರೂ ಸರ್ಕಾರದ ಬಗ್ಗೆ ಚಿಂತಿಸಬೇಕು ಎಂದು ಪ್ರಧಾನಿ ಹೇಳಿಕೆ ಉಲ್ಲೇಖಿಸಿರುವ ಅವರು, ‘ಸರ್ಕಾರವನ್ನು ಮುನ್ನಡೆಸಿ. ಆದರೆ, ಸೇಡಿನ ಭಾವ ಬೇಡ. ರಾಜಕೀಯ ಆಸಕ್ತಿ ಮತ್ತು ನಿರಾಸಕ್ತಿಗಳಿಗೆ ಅನುಗುಣವಾಗಿ ಸರ್ಕಾರ ನಡೆಸಿದರೆ, ಏಕಾಂಗಿಯಾಗಿ ಉಳಿದುಬಿಡುತ್ತೀರಿ’ ಎಂದು ಸಲಹೆ ಮಾಡಿದ್ದಾರೆ.
ಮುಖ್ಯಮಂತ್ರಿಯವರ ಹೇಳಿಕೆಯನ್ನು ನಾಟಕೀಯ ಎಂದು ಬಣ್ಣಿಸಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ, ‘ಬಜೆಟ್‌ನಲ್ಲಿ ಉಲ್ಲೇಖಿಸಿದ ರಾಜ್ಯಗಳಿಗಷ್ಟೇ ಅನುಕೂಲ ದೊರೆತಿದೆ ಎಂಬಂತೆ ಜನರನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ’ ಎಂದು ಟೀಕಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.