ADVERTISEMENT

ನ.1-19ರವರೆಗೆ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸಬೇಡಿ: ಪನ್ನು ಹೊಸ ಬೆದರಿಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಅಕ್ಟೋಬರ್ 2024, 6:35 IST
Last Updated 21 ಅಕ್ಟೋಬರ್ 2024, 6:35 IST
<div class="paragraphs"><p>ಗುರುಪತ್ವಂತ್ ಸಿಂಗ್ ಪನ್ನು</p></div>

ಗುರುಪತ್ವಂತ್ ಸಿಂಗ್ ಪನ್ನು

   

ನವದೆಹಲಿ: ಖಾಲಿಸ್ತಾನ ಪ್ರತ್ಯೇಕ ರಾಷ್ಟ್ರದ ಹೋರಾಟಗಾರ ಗುರು ಪತ್ವಂತ್ ಸಿಂಗ್ ಪನ್ನು ಹೊಸ ಬೆಂದರಿಕೆ ಹಾಕಿದ್ದಾರೆ.

ನವೆಂಬರ್ 1ರಿಂದ 19ರವರೆಗೆ ಏರ್ ಇಂಡಿಯಾ ವಿಮಾನಗಳಲ್ಲಿ ಯಾರೂ ಪ್ರಯಾಣಿಸಬೇಡಿ. ಕಾಕತಾಳೀಯವೆಂಬಂತೆ, ಸಿಖ್ ಹತ್ಯಾಕಾಂಡಕ್ಕೆ 40 ವರ್ಷ ಪೂರ್ಣಗೊಳ್ಳುವ ನಿರ್ದಿಷ್ಟ ದಿನಾಂಕದಂದು ಏರ್‌ ಇಂಡಿಯಾ ವಿಮಾನದ ಮೇಲೆ ದಾಳಿ ನಡೆಯಲಿದೆ ಎಂದು ಎಚ್ಚರಿಸಿದ್ದಾರೆ ಎಂಬುದಾಗಿ ‘ಇಂಡಿಯಾ ಟುಡೇ’ ವರದಿ ಮಾಡಿದೆ.

ADVERTISEMENT

ಕೆನಡಾ ಮತ್ತು ಅಮೆರಿಕ ಪೌರತ್ವ ಹೊಂದಿರುವ ಸಿಖ್ಸ್ ಫಾರ್ ಜಸ್ಟೀಸ್(ಎಸ್‌ಎಫ್‌ಜೆ) ಸಂಸ್ಥಾಪಕ ಪನ್ನು, ಕಳೆದ ವರ್ಷ ಸಹ ಇದೇ ಅವಧಿಯಲ್ಲಿ ಬೆದರಿಕೆ ಒಡ್ಡಿದರು.

ಬಾಂಬ್ ಇಟ್ಟಿರುವುದಾಗಿ ಭಾರತದ ವಿವಿಧ ವಿಮಾನಗಳಿಗೆ ಬೆದರಿಕೆ ಕರೆ ಬರುತ್ತಿರುವ ಈ ಸಂದರ್ಭದಲ್ಲೇ ಪನ್ನು ಸಹ ಬೆದರಿಕ ಹಾಕಿದ್ದಾರೆ.

ನಿಜ್ಜರ್ ಹತ್ಯೆ ಸೇರಿದಂತೆ ಕೆನಡಾದಲ್ಲಿರುವ ಖಾಲಿಸ್ತಾನ ಹೋರಾಟಗಾರರನ್ನು ಭಾರತ ಗುರಿಯಾಗಿಸಿಕೊಂಡಿದೆ ಎಂದು ಕೆನಡಾ ಆರೋಪಿಸುತ್ತಿದ್ದು, ಇದರ ಬೆನ್ನಲ್ಲೇ ಉಭಯ ರಾಷ್ಟ್ರಗಳ ನಡುವೆ ರಾಜತಾಂತ್ರಿಕ ಸಂಘರ್ಷ ನಡೆಯುತ್ತಿದೆ.

2023ರ ನವೆಂಬರ್‌ನಲ್ಲೂ ಇದೇ ರೀತಿಯ ಬೆದರಿಕೆ ಒಡ್ಡಿದ್ದ ಪನ್ನು, ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನನಿಲ್ದಾಣದ ಹೆಸರು ಬದಲಿಸಲಾಗುವುದು. ನವೆಂಬರ್ 19ರಂದು ಏರ್‌ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸದಂತೆ ಎಚ್ಚರಿಕೆ ನೀಡಿದ್ದರು. ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಈತನ ವಿರುದ್ಧ ಯುಎಪಿಎ ಕಾಯ್ದೆ ಅಡಿ ಪ್ರಕರಣ ದಾಖಲಿಸಿದೆ.

ಡಿಸೆಂಬರ್ 13ರಂದು ಅಥವಾ ಅದಕ್ಕೂ ಮುನ್ನ ಸಂಸತ್ ಭವನವನ್ನು ಸ್ಫೋಟಿಸುವುದಾಗಿ ಕಳೆದ ವರ್ಷ ಬೆದರಿಕೆ ಹಾಕಿದ್ದರು.

ಈ ವರ್ಷದ ಗಣರಾಜ್ಯೋತ್ಸವ ದಿನದಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್, ಡಿಜಿಪಿ ಗೌರವ್ ಯಾದವ್ ಅವರನ್ನೂ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು. ಅಲ್ಲದೆ, ಗ್ಯಾಂಗ್‌ಸ್ಟರ್‌ಗಳೆಲ್ಲ ಒಂದಾಗಿ ಮಾನ್ ವಿರುದ್ಧ ದಾಳಿ ನಡೆಸಿ ಎಂದು ಕರೆನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.