ಮುಂಬೈ:ಮುಂಬೈಯ ಬಾಂದ್ರಾದಲ್ಲಿ ಭಾನುವಾರ ಆತ್ಮಹತ್ಯೆ ಮಾಡಿಕೊಂಡ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮೃತದೇಹದ ಫೋಟೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡಬೇಡಿ ಎಂದು ಮಹಾರಾಷ್ಟ್ರ ಪೊಲೀಸರ ಸೈಬರ್ ವಿಭಾಗ ಹೇಳಿದೆ.
ಮೃತದೇಹದ ಫೋಟೊ ಶೇರ್ ಮಾಡುವಟ್ರೆಂಡ್ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ ಪೊಲೀಸರು ಈ ರೀತಿಯ ಫೋಟೊಗಳನ್ನು ಆನ್‌ಲೈನ್‌ನಲ್ಲಿ ಹರಿಯಬಿಟ್ಟರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
34ರ ಹರೆಯದ ಸುಶಾಂತ್ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ನಟನ ಅಪಾರ್ಟ್‌ಮೆಂಟ್ ಒಳಗಿನ ದೃಶ್ಯಗಳು, ಮೃತದೇಹ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಈ ರೀತಿ ಫೋಟೊ, ವಿಡಿಯೊಗಳನ್ನು ಶೇರ್ ಮಾಡುತ್ತಿರುವುದು ಕೆಟ್ಟ ಅಭಿರುಚಿ ಎಂದು ಸೈಬರ್ ವಿಭಾಗ ಹೇಳಿದೆ.
ಈ ರೀತಿಯ ಫೋಟೊಗಳನ್ನು ಶೇರ್ ಮಾಡಬೇಡಿ. ಈಗಾಗಲೇ ಶೇರ ಮಾಡಿದ್ದರೆ ಅದನ್ನು ಡಿಲೀಟ್ ಮಾಡಿ ಎಂದು ಪೊಲೀಸರು ಹೇಳಿದ್ದಾರೆ.
ಡಿಜಿಟಲ್ ಕಾಲದಲ್ಲಿ ಪ್ರತಿಯೊಂದು ಮಾಹಿತಿಯನ್ನು ಓದಬೇಕು, ನೋಡಬೇಕು, ಅದು ತಪ್ಪೋ ಸರಿಯೋ ಎಂಬುದನ್ನು ಪರಾಂಬರಿಸಬೇಕು ಆ ನಂತರವೇ ಅದನ್ನು ಫಾರ್ವರ್ಡ್ ಮಾಡಬೇಕು ಎಂದಿದ್ದಾರೆ ಪೊಲೀಸರು. ಸುಶಾಂತ್ ಮನೆಯಲ್ಲಿ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.