ಮುಂಬೈ: ‘ರಫೇಲ್ ವಿಮಾನ ಖರೀದಿ ವಿಚಾರದಲ್ಲಿ ಹೆಚ್ಚು ಮಾತನಾಡಬೇಡಿ. ಅನಗತ್ಯ ಹೇಳಿಕೆಗಳಿಂದ ಸಮಸ್ಯೆ ಹೆಚ್ಚಾಗಬಹುದು’ ಎಂದು ಎನ್‌ಡಿಎ ಅಂಗ ಪಕ್ಷವಾಗಿರುವ ಶಿವಸೇನಾ ಶುಕ್ರವಾರ ಬಿಜೆಪಿಗೆ ಸಲಹೆ ನೀಡಿದೆ.
ಪಕ್ಷದ ಮುಖವಾಣಿ ‘ಸಾಮ್ನಾ’ದ ಸಂಪಾದಕೀಯದಲ್ಲಿ ಬಿಜೆಪಿಗೆ ಈ ಸಲಹೆ ನೀಡಿರುವ ಪಕ್ಷವು, ‘ಮೋದಿ ಅವರ ಪ್ರಚಾರ ರ್‍ಯಾಲಿಗಳಿಗೆ ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಸಿಗುತ್ತಿರುವ ಪ್ರಚಾರದಿಂದ ಬಿಜೆಪಿ ಸಮಾಧಾನಪಟ್ಟಿದ್ದಿದ್ದರೆ ‘ನಮೋ ಟಿ.ವಿ.’ ನಿಷೇಧಕ್ಕೆ ಒಳಗಾಗುವುದನ್ನು ತಪ್ಪಿಸಬಹುದಾಗಿತ್ತು’ ಎಂದೂ ಹೇಳಿದೆ.
ಮಹಾರಾಷ್ಟ್ರದ ಜಲಗಾಂವ್‌ನಲ್ಲಿ ಈಚೆಗೆ ನಡೆದ ರ್‍ಯಾಲಿಯಲ್ಲಿ ಮಹಾರಾಷ್ಟ್ರದ ಸಚಿವ ಗಿರೀಶ್ ಮಹಾಜನ್ ಅವರ ಸಮ್ಮುಖದಲ್ಲೇ ಬಿಜೆಪಿ ಕಾರ್ಯಕರ್ತರು ಶಿವಸೇನಾ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿರುವುದನ್ನು ಉಲ್ಲೇಖಿಸಿರುವ ಪತ್ರಿಕೆ, ‘ಈ ಹಲ್ಲೆಯನ್ನು ಯಾವ ರೀತಿಯಲ್ಲೂ ಸಮರ್ಥಿಸಿಕೊಳ್ಳಲಾಗದು’ ಎಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.