ನವದೆಹಲಿ:ಸೈಕಲ್ ಸವಾರಿ ಮೂಲಕ ಕಚೇರಿಗೆ ಬಂದು ಆರೋಗ್ಯದ ಕುರಿತಾಗಿ ಗಮನ ಸೆಳೆದಿದ್ದಾರೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಹರ್ಷವರ್ಧನ್.
ಡಾ.ಹರ್ಷವರ್ಧನ್ ಅವರು ಸಚಿವಾಲಯಕ್ಕೆ ಸೈಕಲ್‌ನಲ್ಲಿ ಬಂದುನೂತನ ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿ ಸೋಮವಾರ ಅಧಿಕಾರ ಸ್ವೀಕರಿಸಿದ್ದಾರೆ.
ರಕ್ಷಣಾ ಸಚಿವರು ಹಾಗೂ ಗೃಹ ಸಚಿವರು ಹುತಾತ್ಮ ಯೋಧರ ಸ್ಮಾರಕಗಳಿಗೆ ನಮನ ಸಲ್ಲಿಸಿ, ಬಳಿಕ ಸಚಿವಾಲಯದ ಕಚೇರಿಗಳಿಗೆ ತೆರಳಿ ಅಧಿಕಾರ ಸ್ವೀಕರಿಸಿದ್ದರು.
ವಿಶ್ವ ಸೈಕಲ್ ದಿನಾಚರಣೆ ಸಂದರ್ಭದಲ್ಲಿ ಸಚಿವ ಹರ್ಷವರ್ಧನ್ ಕಾರು ಬಿಟ್ಟು ಸೈಕಲ್ ಏರಿರುವುದು ಗಮನಾರ್ಗಹ ಸಂಗತಿ.
ಸೈಕಲ್ ತುಳಿಯುವುದು ಸರಳ ಮತ್ತು ಆರೋಗ್ಯಕ್ಕೆ ಒಳ್ಳೆಯದು. ಶುದ್ಧ ಮತ್ತು ಸುಸ್ಥಿರ ಪರಿಸರಕ್ಕೆ ಸೂಕ್ತ ಮಾರ್ಗವಾಗಿದೆ ಎಂದು ಸಚಿವ ಹರ್ಷವರ್ಧನ್ ಟ್ವೀಟ್ ಮಾಡಿದ್ದಾರೆ.
ಜೂನ್ 3 ವಿಶ್ವ ಬೈಸಿಕಲ್ ದಿನ ಎಂದು ವಿಶ್ವಸಂಸ್ಥೆ ಸಾಮಾನ್ಯ ಸಭೆ ಘೋಷಿಸಿದೆ. ಈ ದಿನದಂದು ಸೈಕಲ್ ಬಳಸುವ ಮೂಲಕ ಸುಸ್ಥಿರ ಅಭಿವೃದ್ಧಿಗೆ ಕೊಡುಗೆ ನೀಡಿ. ಪರಿಸರ ಉಳಿವು ಮತ್ತು ವಾಯು ಮಾಲಿನ್ಯ ತಡೆಗೆ ಸೈಕಲ್ ಓಡಿಸುವುದು ನಮ್ಮ ನೆಚ್ಚಿನ ಕ್ರೀಡೆ ಎಂದು ಮುಂದುವರಿಯುವ ಅಗತ್ಯವಿದೆ ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.