ADVERTISEMENT

ದೇಶದ ಅತ್ಯಂತ ಹಗುರ, ಸುರಕ್ಷಿತ ಬುಲೆಟ್ ಪ್ರೂಫ್ ಜಾಕೆಟ್‌ ಅಭಿವೃದ್ಧಿಪಡಿಸಿದ DRDO

ಪಿಟಿಐ
Published 24 ಏಪ್ರಿಲ್ 2024, 3:56 IST
Last Updated 24 ಏಪ್ರಿಲ್ 2024, 3:56 IST
<div class="paragraphs"><p>ಬುಲೆಟ್ ಪ್ರೂಫ್ ಜಾಕೆಟ್‌ </p></div>

ಬುಲೆಟ್ ಪ್ರೂಫ್ ಜಾಕೆಟ್‌

   

ನವದೆಹಲಿ: ಯೋಧರು, ಸಶಸ್ತ್ರ ಪಡೆಗಳ ಸಿಬ್ಬಂದಿಗಾಗಿ ಕಠಿಣ ಸಂದರ್ಭಗಳಲ್ಲಿ ಬಳಸಲು ಸುರಕ್ಷಿತ ಮತ್ತು ಹಗುರವಾದ ಬುಲೆಟ್ ಪ್ರೂಫ್ ಜಾಕೆಟ್‌ ಅನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಘಟನೆಯು (ಡಿಆರ್‌ಡಿಒ) ಅಭಿವೃದ್ಧಿಪಡಿಸಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

ಹೊಸ ವಿನ್ಯಾಸದಿಂದ ಕೂಡಿರುವ ಈ ಜಾಕೆಟ್ ದೇಶದಲ್ಲಿಯೇ ಅತ್ಯಂತ ಹಗುರವಾದ ಬುಲೆಟ್ ಪ್ರೂಫ್ ಜಾಕೆಟ್ ಆಗಿದೆ. ಈಚೆಗೆ ಈ ಜಾಕೆಟ್ ಅನ್ನು ಯಶಸ್ವಿಯಾಗಿ ಪರೀಕ್ಷಿಸಲಾಯಿತು ಎಂದು ಸಚಿವಾಲಯ ಹೇಳಿದೆ.

ADVERTISEMENT

ಈ ಜಾಕೆಟ್‌ನ ಮುಂಭಾಗದ ಹಾರ್ಡ್ ಆರ್ಮರ್ ಪ್ಯಾನೆಲ್ (ಎಚ್‌ಎಪಿ) ಅನ್ನು ಪಾಲಿಮರ್ ಬ್ಯಾಕಿಂಗ್‌ನೊಂದಿಗೆ ಏಕಶಿಲೆಯ ಸೆರಾಮಿಕ್ ಪ್ಲೇಟ್‌ನಿಂದ ವಿನ್ಯಾಸಗೊಳಿಸಲಾಗಿದೆ. ಇದು ಕಾರ್ಯಾಚರಣೆ ಸಂದರ್ಭದಲ್ಲಿ ಗುಂಡಿನ ದಾಳಿಯನ್ನು ತಡೆಯುವ ಸಾಮರ್ಥ್ಯವನ್ನು ಹೊಂದಿದೆ. ಜತೆಗೆ ಜಾಕೆಟ್‌ನಲ್ಲಿ ಇರುವ ಬಿಗಿ ನೇಯ್ಗೆಯು ಗುಂಡು ಒಳಗೆ ನುಗ್ಗದಂತೆ ನೋಡಿಕೊಳ್ಳುತ್ತದೆ ಎಂದು ಸಚಿವಾಲಯ ವಿವರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.