ಹೈದರಾಬಾದ್: ಬ್ಯಾಂಕಾಕ್‌ನಿಂದ ಬರುತ್ತಿದ್ದ ಇಬ್ಬರು ಭಾರತೀಯ ಪ್ರಮಾಣಿಕರಿಂದ ₹7 ಕೋಟಿ ಮೌಲ್ಯದ 7 ಕೆ.ಜಿ ಗಾಂಜಾ (Hydroponic Weed) ವಶಪಡಿಸಿಕೊಳ್ಳಲಾಗಿದೆ ಎಂದು ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಗುರುವಾರ ಪ್ರಯಾಣಿಕರ ಚೆಕ್-ಇನ್ ಲಗ್ಗೇಜ್ ಪರಿಶೀಲಿಸಿದಾಗ ಚಾಕೊಲೇಟ್ ಕವರ್‌ಗಳಲ್ಲಿ 13 ವ್ಯಾಕ್ಯೂಮ್-ಪ್ಯಾಕ್ಡ್ ಪಾರದರ್ಶಕ ಪ್ಯಾಕೆಟ್‌ಗಳು ಪತ್ತೆಯಾಗಿವೆ ಎಂದು ಡಿಆರ್‌ಐ ಅಧಿಕಾರಿಗಳು ತಿಳಿಸಿದ್ದಾರೆ.
ಎಲ್ಲ 13 ಪ್ಯಾಕೆಟ್‌ಗಳನ್ನು ಪರೀಕ್ಷೆಗೆ ಒಳಪಡಿಸಿದಾಗ ಗಾಂಜಾ ಇರುವುದು ಪತ್ತೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
1985ರ ಎನ್‌ಡಿಪಿಎಸ್ ಕಾಯ್ದೆ, ನಿಬಂಧನೆಗಳ ಅಡಿಯಲ್ಲಿ ಇಬ್ಬರು ಪ್ರಯಾಣಿಕರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ತನಿಖೆ ಪ್ರಗತಿಯಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.