ADVERTISEMENT

ಪಂಜಾಬ್‌: ಪಿಸ್ತೂಲ್‌ಗಳನ್ನು ಸಾಗಿಸುತ್ತಿದ್ದ ಪಾಕ್‌ ಡ್ರೋನ್‌ ಹೊಡೆದುರುಳಿಸಿದ BSF

ಪಿಟಿಐ
Published 14 ಜುಲೈ 2024, 5:09 IST
Last Updated 14 ಜುಲೈ 2024, 5:09 IST
<div class="paragraphs"><p>ಡ್ರೋನ್‌</p></div>

ಡ್ರೋನ್‌

   

-ರಾಯಿಟರ್ಸ್ ಚಿತ್ರ

ಚಂಡೀಗಢ: ಪಂಜಾಬ್‌ನ ಫಾಜಿಲ್ಕಾ ಜಿಲ್ಲೆಯ ಅಂತರರಾಷ್ಟ್ರೀಯ ಗಡಿಯ ಬಳಿ ಮೂರು ಪಿಸ್ತೂಲ್‌ಗಳನ್ನು ಹೊತ್ತು ಸಾಗುತ್ತಿದ್ದ ಪಾಕಿಸ್ತಾನದ ಡ್ರೋನ್‌ ಅನ್ನು ಗಡಿ ಭದ್ರತಾ ಪಡೆಯು (ಬಿಎಸ್‌ಎಫ್‌) ಹೊಡೆದುರುಳಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

‘ಪಾಕಿಸ್ತಾನದ ಕಡೆಯಿಂದ ಬರುತ್ತಿದ್ದ ಡ್ರೋನ್ ಅನ್ನು ಗಮನಿಸಿದ ಕೂಡಲೇ ಗಡಿ ಭದ್ರತಾ ಪಡೆ ಸಿಬ್ಬಂದಿ ಅದರ ಮೇಲೆ ಗುಂಡು ಹಾರಿಸಿದ್ದಾರೆ. ಬಳಿಕ ನಡೆದ ಶೋಧ ಕಾರ್ಯಾಚರಣೆಯಲ್ಲಿ ಪಿಸ್ತೂಲ್‌ಗಳು ಇದ್ದ ಪ್ಯಾಕೆಟ್ ಜೊತೆಗೆ ಚೀನಾ ನಿರ್ಮಿತ ಡ್ರೋನ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.

ಫಾಜಿಲ್ಕಾ ಜಿಲ್ಲೆಯ ಮಹರ್ಸೋನಾ ಗ್ರಾಮದ ಕೃಷಿ ಹೊಲದಲ್ಲಿ ಡ್ರೋನ್ ಹೊಡೆದುರುಳಿಸಲಾಗಿದೆ. ಪ್ಯಾಕೆಟ್‌ನಲ್ಲಿ ಮೂರು ಪಿಸ್ತೂಲ್‌ಗಳು ಮತ್ತು ಏಳು ಮ್ಯಾಗಜೀನ್‌ಗಳು ಪತ್ತೆಯಾಗಿವೆ ಎಂದು ಬಿಎಸ್‌ಎಫ್ ಅಧಿಕಾರಿ ತಿಳಿಸಿದ್ದಾರೆ.

ಮತ್ತೊಂದು ಘಟನೆಯಲ್ಲಿ ಗುರುದಾಸ್‌ಪುರ ಜಿಲ್ಲೆಯ ರಟ್ಟಾರ್ ಚತ್ತರ್ ಗ್ರಾಮದ ಬಳಿಯ ಹೊಲವೊಂದರಲ್ಲಿ 2.3 ಕೆ.ಜಿ ಹೆರಾಯಿನ್ ಹೊಂದಿರುವ ಪ್ಯಾಕೆಟ್ ಅನ್ನು ಬಿಎಸ್‌ಎಫ್ ವಶಪಡಿಸಿಕೊಂಡಿದೆ ಎಂದು ವರದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.