ADVERTISEMENT

ಆಂಧ್ರಪ್ರದೇಶ: ಐದು ಗಿನ್ನೀಸ್‌ ದಾಖಲೆ ನಿರ್ಮಿಸಿದ ಡ್ರೋನ್‌ ಪ್ರದರ್ಶನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಅಕ್ಟೋಬರ್ 2024, 11:35 IST
Last Updated 23 ಅಕ್ಟೋಬರ್ 2024, 11:35 IST
<div class="paragraphs"><p>ಡ್ರೋನ್‌ ಶೋ</p></div>

ಡ್ರೋನ್‌ ಶೋ

   

ಅಮರಾವತಿ: ಆಂಧ್ರಪ್ರದೇಶದಲ್ಲಿ ನಡೆದ ‘ಅಮರಾವತಿ ಡ್ರೋನ್‌ ಸಮ್ಮೇಳನ 2024’ರಲ್ಲಿ ಪ್ರದರ್ಶನಗೊಂಡ ಡ್ರೋನ್‌ ಶೋ ಬರೋಬ್ಬರಿ ಐದು ಗಿನ್ನೀಸ್ ವಿಶ್ವ ದಾಖಲೆಗಳನ್ನು ನಿರ್ಮಿಸಿದೆ.

ಕೃಷ್ಣಾ ನದಿ ತಟದ ಪೂರ್ಣಿಮಾ ಘಾಟ್‌ನಲ್ಲಿ ನಡೆದ ಶೋನಲ್ಲಿ ಭಾರತದ ಧ್ವಜ, ಬುದ್ಧ, ವಿಮಾನ ಹೀಗೆ ಹಲವು ಮಾದರಿಗಳನ್ನು ಡ್ರೋನ್‌ಗಳ ಮೂಲಕ ಸೃಷ್ಟಿಸಲಾಗಿತ್ತು.

ADVERTISEMENT

ಈ ಡ್ರೋನ್‌ ಪ್ರದರ್ಶನದಲ್ಲಿ, ‘ಅತಿದೊಡ್ಡ ಸೌರ ಮಂಡಲ, ಅತಿ ದೊಡ್ಡ ಭಾರತದ ಪ್ರಮುಖ ಮೈಲಿಗಲ್ಲುಗಳ ಪ್ರದರ್ಶನ, ಅತಿದೊಡ್ಡ ವಿಮಾನದ ವಿನ್ಯಾಸ, ಅತಿದೊಡ್ಡ ಧ್ವಜ ಪ್ರದರ್ಶನ ಮತ್ತು ಅತಿದೊಡ್ಡ ವೈಮಾನಿಕ ಲಾಂಛನ ಪ್ರದರ್ಶನದ ಮೂಲಕ ಗಿನ್ನೀಸ್‌ ವಿಶ್ವ ದಾಖಲೆ ನಿರ್ಮಿಸಿತು.

ಸಾವಿರಾರು ಜನರು ಕಣ್ಣರಳಿಸಿ ನಿಂತು ಡ್ರೋನ್‌ ಶೋ ಕಣ್ತುಂಬಿಕೊಂಡರು. ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಕೂಡ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಡ್ರೋನ್‌ ಪ್ರದರ್ಶನ ವೀಕ್ಷಿಸಿದರು. ಬಳಿಕ ಮಾತನಾಡಿದ ಅವರು, ಅಮರಾವತಿಯನ್ನು ಡ್ರೋನ್‌ಗಳ ರಾಜಧಾನಿ ಮತ್ತು ಇಡೀ ಆಂಧ್ರಪ್ರದೇಶವನ್ನು ನವೀನ ಡ್ರೋನ್‌ಗಳ ಕೇಂದ್ರವನ್ನಾಗಿಸುವ ಗುರಿಯಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.