ADVERTISEMENT

ಉತ್ತರ ಪ್ರದೇಶ | ಮಾದಕವಸ್ತು ತಯಾರಿಕೆ ಪ್ರಯೋಗಾಲಯ ಪತ್ತೆ

95 ಕೆ.ಜಿಯಷ್ಟು ‘ಮೆಥಮ್‌ಫೆಟಮೀನ್‌’ ಮಾದಕವಸ್ತು ವಶ: ಎನ್‌ಸಿಬಿ ಮಾಹಿತಿ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2024, 16:00 IST
Last Updated 29 ಅಕ್ಟೋಬರ್ 2024, 16:00 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ನವದೆಹಲಿ: ಉತ್ತರ ಪ್ರದೇಶದ ಗೌತಮ್‌ ಬುದ್ಧ ನಗರದಲ್ಲಿನ ಕೈಗಾರಿಕಾ ಪ್ರದೇಶದಲ್ಲಿ ಸಿನ್‌ಥೆಟಿಕ್ ಮಾದಕವಸ್ತುಗಳನ್ನು ತಯಾರಿಸುತ್ತಿದ್ದ ಪ್ರಯೋಗಾಲಯವೊಂದನ್ನು ಮಾದಕವಸ್ತು ನಿಯಂತ್ರಣ ಘಟಕವು (ಎನ್‌ಸಿಬಿ) ಪತ್ತೆಹಚ್ಚಿದೆ. ಈ ಸಂಬಂಧ ತಿಹಾರ್‌ ಜೈಲಿನ ವಾರ್ಡನ್‌ ಹಾಗೂ ಇಬ್ಬರು ಉದ್ಯಮಿಗಳನ್ನು ಸೇರಿ ಐವರನ್ನು ಎನ್‌ಸಿಬಿ ಬಂಧಿಸಿದೆ.

ಈ ಪ್ರಯೋಗಾಲಯದ ಮೇಲೆ ಅ.25ರಂದು ಎನ್‌ಸಿಬಿ ದಾಳಿ ನಡೆಸಿತ್ತು. ಈ ವೇಳೆ 95 ಕೆ.ಜಿಯಷ್ಟು ‘ಮೆಥಮ್‌ಫೆಟಮೀನ್‌’ ಮಾದಕವಸ್ತುವನ್ನು ವಶಕ್ಕೆ ಪಡೆದಿತ್ತು. ‘ಕಾರ್ಥೆಲ್‌ ಜಲೀಸ್ಕೊ ನೋವಾ ಜೆನೆರೊಷಿಯೊನ್‌’ ಎನ್ನುವ ಮೆಕ್ಸಿಕೊದ ಮಾದಕವಸ್ತು ಜಾಲದ ಪ್ರಮುಖ ಗುಂಪಿನೊಂದಿಗೂ ಈ ಪ್ರಯೋಗಾಲಯ ನಡೆಸುತ್ತಿದ್ದವರಿಗೂ ಸಂಪರ್ಕವಿದೆ ಎಂದು ಎನ್‌ಸಿಬಿ ಹೇಳಿದೆ.

ADVERTISEMENT

‘ಅಸೆಟೋನ್‌, ಸೋಡಿಯಂ ಹೈಡ್ರಾಕ್ಸೈಡ್‌, ಮಿಥಿಲೀನ್‌ ಕ್ಲೋರೈಸ್‌, ಎಥೆನಾಲ್‌, ಟೊಲೀನ್‌, ಪ್ರಾಸ್ಫರಸ್‌, ಎಥೈಲ್‌ ಅಸಿಟೇಟ್‌ನಂಥ ರಾಸಾಯನಿಕಗಳನ್ನು ಹಾಗೂ ಆಮದು ಮಾಡಿಕೊಂಡಿದ್ದ ವಾದಕವಸ್ತು ತಯಾರಿಕೆಗೆ ಬಳಸುತ್ತಿದ್ದ ಯಂತ್ರಗಳನ್ನು ವಶಕ್ಕೆ ಪಡೆಯಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.