ADVERTISEMENT

ಕುಡಿದ ಅಮಲಿನಲ್ಲಿ ಹೆತ್ತ ತಾಯಿಗೆ ಥಳಿಸುತ್ತಿದ್ದ ಮಗನ ಬಂಧನ

ಐಎಎನ್ಎಸ್
Published 26 ಜನವರಿ 2023, 13:51 IST
Last Updated 26 ಜನವರಿ 2023, 13:51 IST
   

ತಿರುವನಂತಪುರಂ: ಕುಡಿದ ಅಮಲಿನಲ್ಲಿ ತನ್ನ ತಾಯಿಗೆ ಥಳಿಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಗುರುವಾರ ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.

ಕೊಟ್ಟಾಯಂನ ಮೀನಾಡೋಮ್‌ನಲ್ಲಿ ಈ ಘಟನೆ ನಡೆದಿದ್ದು, ಕೊಚುಮೊನ್ (48) ಬಂಧಿತ. ಕುಡಿದು ಬಂದು ಮನೆಯಲ್ಲಿ ತಾಯಿಗೆ ಥಳಿಸುತ್ತಿದ್ದ ದೃಶ್ಯವನ್ನು ಆತನ ಪತ್ನಿಯೇ ವಿಡಿಯೊ ಮಾಡಿದ್ದು, ಇದೀಗ ಆ ವಿಡಿಯೊ ಎಲ್ಲೆಡೆ ಹರಿದಾಡುತ್ತಿದೆ.

ಕೊಚುಮೊನ್ ಕುಡಿದ ಅಮಲಿನಲ್ಲಿ ತನ್ನ ತಾಯಿಗೆ ಥಳಿಸಲು ಪ್ರಾರಂಭಿಸಿದ್ದಾನೆ. ಇದನ್ನು ನೋಡಲಾಗದ ಆತನ ಪತ್ನಿಯೇ ಈ ದೃಶ್ಯ ಸೆರೆ ಹಿಡಿದು ಸ್ಥಳೀಯ ಗ್ರಾಮ ಪಂಚಾಯ್ತಿ ಸದಸ್ಯರಿಗೆ ವಿಡಿಯೊವನ್ನು ಕಳುಹಿಸಿದ್ದಾರೆ. ತಕ್ಷಣ ಆ ಸದಸ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳೀಯ ಬಾರ್‌ನಲ್ಲಿ ಮದ್ಯಪಾನ ಮಾಡುತ್ತಿದ್ದ ಕೊಚುಮೊನ್‌ನನ್ನು ಬಂಧಿಸಲಾಗಿದೆ.

ADVERTISEMENT

ವಯಸ್ಸಾದ ತಾಯಿಯ ಮೇಲೆ ಕೈ ಎತ್ತದಂತೆ ನೆರೆಹೊರೆಯವರು ಹಲವು ಸಲ ಆತನಿಗೆ ಎಚ್ಚರಿಕೆ ನೀಡಿದ್ದರು. ಗಂಡನ ವರ್ತನೆ ಸಹಿಸದ ಪತ್ನಿ ಕೊನೆಗೆ ಪತಿಗೆ ತಕ್ಕ ಪಾಠ ಕಲಿಸುವ ನಿರ್ಧಾರಕ್ಕೆ ಬಂದಿದ್ದು, ಸದ್ಯ ಕೊಚುಮೊನ್‌ ಜೈಲುವಾಸಿಯಾಗಿದ್ದಾನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.