ADVERTISEMENT

ರೈತ ಮಹಿಳೆ ಕುರಿತು ಅವಹೇಳನಕಾರಿ ಟ್ವೀಟ್‌: ಕಂಗನಾಗೆ ಡಿಎಸ್‌ಜಿಎಂಸಿ ನೋಟಿಸ್‌

ಪ್ರತಿಭಟನಾ ರೈತರ ವಿರುದ್ಧ ಅನುಚಿತ ಪ್ರತಿಕ್ರಿಯೆ

ಪಿಟಿಐ
Published 4 ಡಿಸೆಂಬರ್ 2020, 6:13 IST
Last Updated 4 ಡಿಸೆಂಬರ್ 2020, 6:13 IST
ಕಂಗನಾ ರನೌತ್‌
ಕಂಗನಾ ರನೌತ್‌   

ನವದೆಹಲಿ: ಕೇಂದ್ರದ ಕೃಷಿ ಕಾಯ್ದೆಗಳವಿರುದ್ಧದ ಪ್ರತಿಭಟನೆಯಲ್ಲಿ ಭಾಗಿಯಾಗಿರುವ ರೈತರು ಮತ್ತು ಕಾರ್ಯಕರ್ತರ ಬಗ್ಗೆ ಅವಹೇಳನಕಾರಿಯಾಗಿ ಟ್ವೀಟ್‌ ಮಾಡಿರುವ ಬಾಲಿವುಡ್‌ ಕಂಗನಾ ರನೌತ್‌ಗೆ ನೋಟಿಸ್‌ ನೀಡಿರುವ ದೆಹಲಿ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿ (ಡಿಎಸ್‌ಜಿಎಂಸಿ), ಬೇಷರತ್‌ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದೆ.

ಹಾಗೆಯೇ, ಪ್ರತಿಭಟನಾಕಾರರ ಬಗ್ಗೆ ಮಾಡಿರುವ ಅವಹೇಳನಕಾರಿ ಟ್ವೀಟ್‌ಗಳನ್ನು ತಕ್ಷಣವೇ ತೆಗೆದು ಹಾಕುವಂತೆ ನೋಟಿಸ್‌ನಲ್ಲಿ ಸಮಿತಿ ಒತ್ತಾಯಿಸಿದೆ.

‘₹100 ಬೆಲೆಗೆ ಕೃಷಿಕರೊಬ್ಬರ ವಯಸ್ಸಾದ ತಾಯಿ ಪ್ರತಿಭಟನೆಗೆ ಸಿಗುತ್ತಾರೆ‘ ಎಂದು ಅವಹೇಳನಕಾರಿಯಾಗಿ ಟ್ವೀಟ್‌ ಮಾಡಿದ್ದ@ಕಂಗನಾ ಟೀಮ್‌ಗೆ ಲೀಗಲ್ ನೋಟಿಸ್‌ ನೀಡಿದ್ದೇವೆ. ಇಂಥ ಟ್ವೀಟ್‌ ಮೂಲಕ ರೈತರ ಪ್ರತಿಭಟನೆಯನ್ನು ರಾಷ್ಟ್ರ ವಿರೋಧಿ ಆಂದೋಲನದ ರೀತಿ ಬಿಂಬಿಸಲಾಗುತ್ತಿದೆ. ರೈತರ ಪ್ರತಿಭಟನೆ ಬಗ್ಗೆ ಇಷ್ಟು ಅಸೂಕ್ಷ್ಮವಾಗಿ ವರ್ತಿಸುವ ಅವರು, ಬೇಷರತ್ತಾಗಿ ಕ್ಷಮೆಯಾಚಿಸಬೇಕು‘ ಎಂದು ಸಮಿತಿಯ ಅಧ್ಯಕ್ಷ ಮಜಿಂದರ್ ಸಿಂಗ್‌ ಸಿರ್ಸಾ ಟ್ವೀಟ್‌ನಲ್ಲಿ ಒತ್ತಾಯಿಸಿದ್ದಾರೆ.

ADVERTISEMENT

ನಟಿ ಕಂಗನಾ ರನೌತ್, ವಾರದ ಹಿಂದೆ ಸಿಎಎ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ವೃದ್ಧೆ ಬಿಲ್ಕಿಸ್‌ ಬಾನು ಸೇರಿದಂತೆ ಇಬ್ಬರು ವೃದ್ಧೆಯರ ಫೋಟೊ ಇರುವ ಟ್ವೀಟ್‌ ಮರು ಟ್ವೀಟ್‌ ಮಾಡಿದ್ದರು. ಅದರಲ್ಲಿ ‘ಟೈಮ್ ಮ್ಯಾಗಜಿನ್‌ಲ್ಲಿ ಕಾಣಿಸಿಕೊಂಡ ಅದೇ ದಾದಿ ₹100ಕ್ಕೆ ಲಭ್ಯವಿದ್ದಾರೆ‘ ಎಂದು ಟ್ವೀಟ್‌ನಲ್ಲಿ ಬರೆದುಕೊಂಡಿದ್ದರು.

ವಾರದ ಹಿಂದೆಯೂ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಅಜ್ಜಿಯೊಬ್ಬರನ್ನು, ಶಾಹೀನಾ ಬಾಗ್‌ನ ಸಿಎಎ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಬಿಲ್ಕಿಸ್‌ ಬಾನು (ಅಜ್ಜಿ) ಎಂದು ತಪ್ಪಾಗಿ ತಿಳಿದು ‘ಶಾಹೀನ್‌ ಬಾಗ್‌ ದಾದಿಯೂ ರೈತರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ‘ ಎಂದು ಫೋಟೊ ಸಹಿತ ಟ್ವೀಟ್‌ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.