ಮುಂಬೈ: ನೀರಿನಲ್ಲಿ ತೊಂದರೆಗೆ ಸಿಲುಕಿದ ಜಲಾಂತರ್ಗಾಮಿಯ ಸಿಬ್ಬಂದಿಯನ್ನು ರಕ್ಷಿಸುವ ವಾಹನವನ್ನು ಭಾರತೀಯ ನೌಕಾಪಡೆಗೆ ಬುಧವಾರ ಸೇರ್ಪಡೆ ಮಾಡಲಾಯಿತು. ಈ ಮೂಲಕ ಕೆಲವೇ ದೇಶಗಳ ಸಾಲಿಗೆ ಭಾರತವೂ ಸೇರ್ಪಡೆಯಾಗಿದೆ.
ಎರಡೂ ತೀರಗಳಲ್ಲಿ ನಿಯೋಜನೆ: ಹೊಸದಾಗಿ ಸೇರ್ಪಡೆಯಾದ ನೌಕೆಯು ಮುಂಬೈ ತೀರದಲ್ಲಿ ಇರಲಿದೆ. ಮತ್ತೊಂದು ನೌಕೆಯು ಸದ್ಯದಲ್ಲೇ ಸಿದ್ಧವಾಗಲಿದ್ದು, ಅದು ವಿಶಾಖಪಟ್ಟಣದಲ್ಲಿ ಕಾರ್ಯ ನಿರ್ವಹಿಸಲಿದೆ
ನೌಕಾಪಡೆಗೆ ಹೊಸದು: ಈ ವಿಶಿಷ್ಟವಾಹನವು ನೌಕಾಪಡೆಗೆ ಹೊಸದು. ಈವರೆಗೆ ಇಂತಹ ಸೌಲಭ್ಯ ಇರಲಿಲ್ಲ. ಪರೀಕ್ಷೆಗಳು ಯಶಸ್ವಿಯಾಗಿದ್ದು, ನೌಕಾಪಡೆಗೆ ಬಲ ತುಂಬಿದೆ. ಹಿಂದೂ ಮಹಾಸಾಗರದಲ್ಲಿ ನೆರೆಯ ದೇಶಗಳ ಜಲಾಂತರ್ಗಾಮಿಗಳ ರಕ್ಷಣೆಗೂ ಇದು ಸಿದ್ಧವಿದೆ.
ಕಾರ್ಯಾಚರಣೆ ಹೇಗೆ
l ಇದರಲ್ಲಿ ‘ಸೈಡ್ ಸ್ಕ್ಯಾನ್ ಸೋನಾರ್’ ಸೌಲಭ್ಯವಿದ್ದು, ಜಲಾಂತರ್ಗಾಮಿಯು ನೀರಿನಾಳದಲ್ಲಿ ಎಲ್ಲಿ ಸಿಲುಕಿದೆ ಎಂದು ಪತ್ತೆಹಚ್ಚಲಾಗುತ್ತದೆ.
l ರಿಮೋಟ್ ಆಪರೇಟೆಡ್ ವೆಹಿಕಲ್ ಮೂಲಕ ಜೀವ ಉಳಿಸುವ ಸಾಧನ ಗಳನ್ನು ತಕ್ಷಣಒದಗಿಸುತ್ತದೆ.
l ಜಲಾಂತರ್ಗಾಮಿಯ ಬಾಗಿಲುಗಳನ್ನು ಹಾಗೂ ರಕ್ಷಣಾ ವಾಹನದ ಬಾಗಿಲು ಗಳನ್ನು ತೆರೆದು ಅಲ್ಲಿಂದ ಇಲ್ಲಿಗೆ ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗುತ್ತದೆ.
l ಡಿಎಸ್‌ಆರ್‌ವಿ 666 ಮೀಟರ್ ಆಳದವರೆಗೆ; ಆರ್‌ಒವಿ 777 ಮೀಟರ್ ಹಾಗೂ ಸೈಡ್ ಸ್ಕ್ಯಾನ್ ಸೋನಾರ್ ಸಾಧನಗಳು 650 ಮೀಟರ್‌ವರೆಗೆಮುಳುಗಬಲ್ಲವು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.