ADVERTISEMENT

ಹೈದರಾಬಾದ್‌– ದುಬೈ ವಿಮಾನ ಹೈಜಾಕ್ ಮಾಡುವ ಬೆದರಿಕೆ

ಪಿಟಿಐ
Published 9 ಅಕ್ಟೋಬರ್ 2023, 12:26 IST
Last Updated 9 ಅಕ್ಟೋಬರ್ 2023, 12:26 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಹೈದರಾಬಾದ್: ಹೈದರಾಬಾದ್‌– ದುಬೈ ವಿಮಾನವನ್ನು ಹೈಜಾಕ್‌ ಮಾಡುವುದಾಗಿ ಇ– ಮೇಲ್‌ ಮೂಲಕ ಬೆದರಿಕೆ ಹಾಕಿದ ಕಾರಣ ರಾಜೀವ್‌ ಗಾಂಧಿ ಅಂತರರಾಷ್ಟ್ರಿಯ ವಿಮಾನ ನಿಲ್ದಾಣದಿಂದ ದುಬೈಗೆ ಹೊರಟಿದ್ದ ವಿಮಾನ ಪ್ರಯಾಣವನ್ನು ರದ್ದುಗೊಳಿಸಲಾಗಿದೆ.

ವಿಮಾನ ನಿಲ್ದಾಣದ ವ್ಯವಸ್ಥಾಪಕರಿಗೆ, ಭಾನುವಾರ ಸಂಜೆ ‘ದುಬೈಗೆ ಹೊರಟಿರುವ ವಿಮಾನದಲ್ಲಿ ಐಎಸ್‌ಐ ಉಗ್ರರಿಗೆ ಮಾಹಿತಿ ನೀಡುವ ವ್ಯಕ್ತಿಯಿದ್ದಾನೆ, ಆತ ವಿಮಾನವನ್ನು ಹೈಜಾಕ್‌ ಮಾಡಲಿದ್ದಾನೆ, ಅಲ್ಲದೆ ಆತ ವಿಮಾನ ನಿಲ್ದಾಣದಿಂದಲೇ ಕೆಲವು ಜನರ ಸಹಾಯವನ್ನು ಪಡೆದಿದ್ದಾನೆ’ ಎಂದು ಸುಳ್ಳು ಬೆದರಿಕೆ ಇ– ಮೇಲ್‌ ಕಳುಹಿಸಲಾಗಿತ್ತು. 

ADVERTISEMENT

ಈ ಬಗ್ಗೆ ತನಿಖೆ ನಡೆಸಿದ ಹಿರಿಯ ಪೊಲೀಸ್‌ ಕಮಿಷನರ್‌, ಇದೊಂದು ನಕಲಿ ಇ–ಮೇಲ್‌ ಬೆದರಿಕೆ ಎಂದು ಪತ್ತೆ ಮಾಡಿದ್ದು, ಹೆಚ್ಚಿನ ತನಿಖೆ ಆರಂಭಿಸಿದ್ದಾರೆ.

ಬೆದರಿಕೆ ಕರೆಯಿಂದ ವಿಮಾನ ರದ್ದುಪಡಿಸಿ ಪ್ರಯಾಣಕರಿಗೆ ಪ್ರತ್ಯೇಕ ವಿಮಾನದ ವ್ಯವಸ್ಥೆ ಮಾಡಲಾಗಿದೆ. ಅನುಮಾನ ಬಂದ ಹಿನ್ನೆಲೆಯಲ್ಲಿ ಮೂವರು ಪ್ರಯಾಣಿಕರನ್ನು ಪೊಲೀಸರ ವಶಕ್ಕೆ ನೀಡಲಾಗಿದೆ. ಇ –ಮೇಲ್‌ ಕಳುಹಿಸಿದ ವ್ಯಕ್ತಿಯ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.