ADVERTISEMENT

ಅಫ್ಗಾನಿಸ್ತಾನ, ಪಾಕಿಸ್ತಾನದಲ್ಲಿ ಭೂಕಂಪ: ಉತ್ತರ ಭಾರತದ ಹಲವೆಡೆ ಕಂಪನದ ಅನುಭವ

ಪಿಟಿಐ
Published 11 ಜನವರಿ 2024, 10:29 IST
Last Updated 11 ಜನವರಿ 2024, 10:29 IST
 ಭೂಕಂಪ
ಭೂಕಂಪ    (ಪ್ರಾತಿನಿಧಿಕ ಚಿತ್ರ)

ಕಾಬೂಲ್: ಅಫ್ಗಾನಿಸ್ತಾನದಲ್ಲಿ ಭೂಕಂಪ ಸಂಭವಿಸಿದ್ದು, ದೆಹಲಿ ಮತ್ತು ಎನ್‌ಸಿಆರ್‌ನಲ್ಲಿ ಕಂಪನದ ಅನುಭವವಾಗಿದೆ.

ಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 6.1ರಷ್ಟು ದಾಖಲಾಗಿದೆ. ಉತ್ತರ ಭಾರತದ ಕೆಲವು ಭಾಗಗಳಲ್ಲಿಯೂ ಕಂಪನಗಳು ಉಂಟಾಗಿವೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.

ಮಧ್ಯಾಹ್ನ 2.50ರ ಸುಮಾರಿಗೆ ಭೂಕಂಪ ಸಂಭವಿಸಿದ್ದು, ಭೂಕಂಪದ ಕೇಂದ್ರ ಬಿಂದು ಕಾಬೂಲ್‌ನಿಂದ ಈಶಾನ್ಯಕ್ಕೆ 241 ಕಿ.ಮೀ ದೂರದಲ್ಲಿದೆ ಎಂದು ಅದು ಹೇಳಿದೆ.

ADVERTISEMENT

ಭೂಕಂಪವು ಜನರಲ್ಲಿ ಭೀತಿಯನ್ನು ಉಂಟುಮಾಡಿದ್ದು, ದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ(ಎನ್‌ಸಿಆರ್‌) ಪೀಠೋಪಕರಣಗಳು ಅಲುಗಾಡಿದ ಅನುಭವವಾಗಿದೆ ಎಂದು ವರದಿ ತಿಳಿಸಿದೆ.

ಪಾಕ್‌ನಲ್ಲೂ ನಡುಗಿದ ಭೂಮಿ

ಪಾಕಿಸ್ತಾನದ ಹಲವೆಡೆ ಗುರುವಾರ ಭೂಕಂಪದ ಅನುಭವವಾಗಿದೆ. ಅಫ್ಗಾನಿಸ್ತಾನದ ಹಿಂದೂ ಖುಷ್ ವಲಯದಲ್ಲಿ ಕಂಪನದ ಕೇಂದ್ರ ಬಿಂದುವಿದೆ ಎಂದು ಅಲ್ಲಿನ ಹವಾಮಾನ ಇಲಾಖೆ ತಿಳಿಸಿದೆ.

ಮಧ್ಯಾಹ್ನ 2.29ರ ಸುಮಾರಿಗೆ ಹಿಂದೂ ಖುಷ್ ವಲಯದ 213 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.