ADVERTISEMENT

ಗಡಿ ಬಿಕ್ಕಟ್ಟು: ಮತ್ತೆ ಮಾತುಕತೆಗೆ ಭಾರತ–ಚೀನಾ ಒಪ್ಪಿಗೆ

ಪಿಟಿಐ
Published 31 ಮೇ 2022, 20:11 IST
Last Updated 31 ಮೇ 2022, 20:11 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಪೂರ್ವ ಲಡಾಖ್‌ ಗಡಿಯಲ್ಲಿನ ಸಂಘರ್ಷವನ್ನು ಶಮನಗೊಳಿಸುವ ನಿಟ್ಟಿನಲ್ಲಿ ಮತ್ತೊಂದು ಸುತ್ತಿನಸೇನಾ ಕಮಾಂಡರ್‌ಗಳ ಸಭೆ ಯನ್ನು ನಡೆಸಲು ಭಾರತ ಹಾಗೂ ಚೀನಾ ಮಂಗಳವಾರ ಸಮ್ಮತಿಸಿದವು.

ಭಾರತ–ಚೀನಾ ಗಡಿ ವ್ಯವಹಾರಗಳಿಗೆ ಸಂಬಂಧಿಸಿದ ಡಬ್ಲ್ಯುಎಂಸಿಸಿಯ (ವರ್ಕಿಂಗ್ ಮೆಕ್ಯಾನಿಸಮ್ ಫಾರ್ ಕನ್ಸಲ್ಟೇಶನ್ ಅಂಡ್ ಕೋಆರ್ಡಿನೇಷನ್) ವರ್ಚುವಲ್‌ ಸಭೆಯಲ್ಲಿ ನಿರ್ಧರಿಸಲಾಯಿತು ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಸಂಘರ್ಷದ ಸ್ಥಳಗಳಿಂದ ಸೈನಿಕ ರನ್ನು ಸಂಪೂರ್ಣವಾಗಿ ಹಿಂದಕ್ಕೆ ಕರೆಸಿಕೊಳ್ಳುವುದು ಹಾಗೂ ದ್ವಿಪಕ್ಷೀಯ ಸಂಬಂಧವನ್ನು ಸಾಮಾನ್ಯಸ್ಥಿತಿಗೆ ತರುವ ಉದ್ದೇಶದ ಈ ಸಭೆಯ ದಿನಾಂಕ
ವನ್ನು ಶೀಘ್ರವೇ ನಿಗದಿಪಡಿಸಲು ನಿರ್ಧರಿಸಲಾಯಿತು. ವಾಸ್ತವ ನಿಯಂತ್ರಣ ರೇಖೆ (ಎಲ್‌ಎಸಿ) ಬಳಿ ಪ್ರಸ್ತುತ ಇರುವ ಸ್ಥಿತಿ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು’ ಎಂದು ಸಚಿವಾಲಯ ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.