ADVERTISEMENT

ರೇವಂತ್ ರೆಡ್ಡಿ ವಿರುದ್ಧ ಕ್ರಮವಿಲ್ಲ ಯಾಕೆ: ಕೆಸಿಆರ್ ಪ್ರಶ್ನೆ

ಪಿಟಿಐ
Published 2 ಮೇ 2024, 2:59 IST
Last Updated 2 ಮೇ 2024, 2:59 IST
   

ಹೈದರಾಬಾದ್‌: ಆಕ್ಷೇಪಾರ್ಹ ಹೇಳಿಕೆ ನೀಡಿದ್ದರೂ ತೆಲಂಗಾಣ ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿ ವಿರುದ್ಧ ಚುನಾವಣಾ ಆಯೋಗ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಭಾರತ ರಾಷ್ಟ್ರ ಸಮಿತಿ(ಬಿಆರ್‌ಎಸ್) ಅಧ್ಯಕ್ಷ ಕೆ. ಚಂದ್ರಶೇಖರ ರಾವ್ ಆರೋಪಿಸಿದರು.

ಮೆಹಬೂಬಾಬಾದ್‌ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ‘48 ಗಂಟೆ ಚುನಾವಣಾ ಪ್ರಚಾರದಲ್ಲಿ ಭಾಗವಹಿಸದಂತೆ ನನಗೆ ಸೂಚಿಸಲಾಗಿದೆ. ಆದರೆ ಬಿಆರ್‌ಆರ್‌ಎಸ್‌ ಕಾರ್ಯಕರ್ತರು 96 ಗಂಟೆಗಳ ಕಾಲ ಅವಿರತವಾಗಿ ಪ್ರಚಾರ ಮಾಡುತ್ತಾರೆ’ ಎಂದು ಹೇಳಿದರು.

‘ನನ್ನ ಮೇಲೆ ಕ್ರಮಕೈಗೊಂಡ ಆಯೋಗ ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿಗೆ ಯಾವುದೇ ನಿರ್ಬಂಧ ಹೇರಿಲ್ಲ ಎಂದು’ ಅಸಮಾಧಾನ ಹೊರಹಾಕಿದರು.

ADVERTISEMENT

ಈ ಕುರಿತಂತೆ ಎಕ್ಸ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಬಿಆರ್‌ಎಸ್ ಕಾರ್ಯಾಧ್ಯಕ್ಷ ಕೆ. ಟಿ. ರಾಮರಾವ್, ಚಂದ್ರಶೇಖರ್ ರಾವ್ ಅವರನ್ನು ನೀವು ತಾತ್ಕಾಲಿಕವಾಗಿ ನಿರ್ಬಂಧಿಸಬಹುದು. ಆದರೆ ತೆಲಂಗಾಣ ಜನರಿಗೆ ಅವರು ಹೇಳಬೇಕೆಂದಿರುವ ಸತ್ಯವನ್ನು ನೀವು ಕೊಲ್ಲಲು ಸಾಧ್ಯವಿಲ್ಲ. ನೆನೆಪಿಡಿ ಕಟುಸತ್ಯವನ್ನು ಅರಗಿಸಿಕೊಳ್ಳಲಾಗದವರು ಸುಳ್ಳಿನಲ್ಲಿ ಬದುಕುತ್ತಿರುತ್ತಾರೆ. ಜೈ ತೆಲಂಗಾಣ’ ಎಂದು ಹೇಳಿದರು.

48 ಗಂಟೆ ಪ್ರಚಾರದಲ್ಲಿ ಭಾಗವಹಿಸದಂತೆ ಕೆಸಿಆರ್‌ಗೆ ನಿರ್ಬಂಧ

ಕಾಂಗ್ರೆಸ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಕೆ. ಚಂದ್ರಶೇಖರ್ ರಾವ್ ಅವರಿಗೆ 48 ಗಂಟೆ ಚುನಾವಣಾ ಪ್ರಚಾರದಲ್ಲಿ ಭಾಗವಹಿಸದಂತೆ ಚುನಾವಣಾ ಆಯೋಗ ನಿರ್ಬಂಧ ವಿಧಿಸಿತ್ತು.

ಸಿರ್ಸಿಲ್ಲಾದಲ್ಲಿ ರಾವ್ ಅವರು ನೀಡಿದ ಹೇಳಿಕೆಯು ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಮಾತ್ರವಲ್ಲದೆ. ಆಕ್ಷೇಪಾರ್ಹ ಮತ್ತು ಮಾನಹಾನಿಕರ ಹೇಳಿಕೆ ಮೂಲಕ ಆಯೋಗದ ಸೂಚನೆಗಳನ್ನೂ ಉಲ್ಲಂಘಿಸಲಾಗಿದೆ ಎಂದು ಚುನಾವಣಾ ಆಯೋಗ ಹೇಳಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.