ADVERTISEMENT

ಜೆಟ್‌ ಏರ್‌ವೇಸ್‌ ಸಂಸ್ಥಾಪಕ ನರೇಶ್‌ ಗೋಯಲ್‌ಗೆ ಸೇರಿದ ₹538 ಕೋಟಿ ಆಸ್ತಿ ಜಪ್ತಿ

ಪಿಟಿಐ
Published 1 ನವೆಂಬರ್ 2023, 14:21 IST
Last Updated 1 ನವೆಂಬರ್ 2023, 14:21 IST
<div class="paragraphs"><p>ನರೇಶ್‌ ಗೋಯಲ್ </p></div>

ನರೇಶ್‌ ಗೋಯಲ್

   

ಪಿಟಿಐ ಚಿತ್ರ

ನವದೆಹಲಿ : ಜೆಟ್‌ ಏರ್‌ವೇಸ್‌ ಸಂಸ್ಥಾಪಕ ನರೇಶ್‌ ಗೋಯಲ್‌ ಹಾಗೂ ಅವರ ಕುಟುಂಬದ ಸದಸ್ಯರಿಗೆ ಸೇರಿದ ₹538.05 ಕೋಟಿ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯವು (ಇ.ಡಿ) ಬುಧವಾರ ತಿಳಿಸಿದೆ.

ADVERTISEMENT

ಇದರಲ್ಲಿ 17 ವಸತಿ ಫ್ಲ್ಯಾಟ್‌ಗಳು, ಬಂಗಲೆಗಳು ಹಾಗೂ ವಾಣಿಜ್ಯ ಕಟ್ಟಡಗಳು ಸೇರಿವೆ. ಲಂಡನ್‌, ದುಬೈ ಹಾಗೂ ಭಾರತದ ವಿವಿಧ ನಗರಗಳಲ್ಲಿ ಗೋಯಲ್‌, ಅವರ ಪತ್ನಿ ಅನಿತಾ ಹಾಗೂ ಅವರ ಪುತ್ರ ನಿವಾನ್‌ ಅವರ ಹೆಸರಿನಲ್ಲಿದ್ದ ಕಂಪನಿಗಳ ಸ್ವತ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ತಿಳಿಸಿದೆ.

ಕೆನರಾ ಬ್ಯಾಂಕ್‌ಗೆ ಕೋಟ್ಯಂತರ ರೂಪಾಯಿ ವಂಚನೆ ಎಸಗಿದ ಆರೋಪ ಗೋಯಲ್‌ ಅವರ ಮೇಲಿದೆ. ಅವರ ವಿರುದ್ಧ ಜಾರಿ ನಿರ್ದೇಶನಾಲಯವು ಹಣ ಅಕ್ರಮ ವರ್ಗಾವಣೆ ಪ್ರಕರಣ ದಾಖಲಿಸಿದೆ. ಅವರ ವಿರುದ್ಧ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಾಗಿದ್ದು, ಸದ್ಯ ಅವರು ಮುಂಬೈನ ಕಾರಾಗೃಹದಲ್ಲಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.