ADVERTISEMENT

ಶಿಕ್ಷಕರ ನೇಮಕಾತಿ ಹಗರಣ: ಟಿಎಂಸಿ ನಾಯಕ ಅಭಿಷೇಕ್‌ ಬ್ಯಾನರ್ಜಿಗೆ ಇ.ಡಿ. ಸಮನ್ಸ್‌

ಪಿಟಿಐ
Published 28 ಸೆಪ್ಟೆಂಬರ್ 2023, 14:52 IST
Last Updated 28 ಸೆಪ್ಟೆಂಬರ್ 2023, 14:52 IST
<div class="paragraphs"><p>ಅಭಿಷೇಕ್‌ ಬ್ಯಾನರ್ಜಿ</p></div>

ಅಭಿಷೇಕ್‌ ಬ್ಯಾನರ್ಜಿ

   

ಕೋಲ್ಕತ್ತ (ಪಿಟಿಐ): ಶಾಲಾ ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿ ಅಕ್ಟೋಬರ್‌ 3ರಂದು ವಿಚಾರಣೆಗೆ ಹಾಜರಾಗುವಂತೆ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ನಾಯಕ ಅಭಿಷೇಕ್‌ ಬ್ಯಾನರ್ಜಿ ಅವರಿಗೆ ಜಾರಿ ನಿರ್ದೇಶನಾಲಯ (ಇ.ಡಿ) ಗುರುವಾರ ಸಮನ್ಸ್‌ ನೀಡಿದೆ.

‘ಮನರೇಗಾ ಯೋಜನೆ ಅಡಿ ರಾಜ್ಯಕ್ಕೆ ನೀಡಬೇಕಿದ್ದ ಅನುದಾನವನ್ನು ತಡೆಹಿಡಿದಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಖಂಡಿಸಿ ದೆಹಲಿಯಲ್ಲಿ ನಡೆಯಲಿರುವ ಪಕ್ಷದ ಪ್ರತಿಭಟನೆಯ ದಿನವೇ ಕಾಕತಾಳೀಯವಾಗಿ ಇ.ಡಿ. ವಿಚಾರಣೆಗೆ ಕರೆದಿದೆ’ ಎಂದು ಅಭಿಷೇಕ್‌ ತಿಳಿಸಿದ್ದಾರೆ.

ADVERTISEMENT

‘ಪ್ರತಿಭಟನೆಯ ಕುರಿತು ಬಿಜೆಪಿಗಿರುವ ಭಯವು ಇ.ಡಿ. ಸಮನ್ಸ್‌ ಮೂಲಕ ಪ್ರಕಟವಾಗಿದೆ’ ಎಂದು ಅವರು ತಿಳಿಸಿದ್ದಾರೆ. ಇ.ಡಿ. ತಮಗೆ ನೀಡಿರುವ ಪತ್ರವನ್ನು ಅವರು ಎಕ್ಸ್ ವೇದಿಕೆಯಲ್ಲಿ (ಟ್ವಿಟರ್‌) ಹಂಚಿಕೊಂಡಿದ್ದಾರೆ.

‘ಈ ತಿಂಗಳ ಆರಂಭದಲ್ಲಿ ದೆಹಲಿಯಲ್ಲಿ ನಡೆದ ವಿರೋಧ ಪಕ್ಷಗಳ ಒಕ್ಕೂಟ ‘ಇಂಡಿಯಾ’ದ ಮಹತ್ವದ ಸಭೆಯ ದಿನವೇ ನನಗೆ ವಿಚಾರಣೆಗೆ ಹಾಜರಾಗಲು ಕಾಕತಾಳೀಯವಾಗಿ ಇ.ಡಿ. ಸಮನ್ಸ್‌ ನೀಡಿತ್ತು. ನಾನು ವಿಚಾರಣೆಗೆ ಹಾಜರಾಗಿದ್ದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.