ADVERTISEMENT

ಬೆಟ್ಟಿಂಗ್, ಅಕ್ರಮವಾಗಿ IPL ಪಂದ್ಯ ಪ್ರಸಾರ: 'Fairplay' ಕಚೇರಿ ಮೇಲೆ ಇ.ಡಿ ದಾಳಿ

ಪಿಟಿಐ
Published 29 ಅಕ್ಟೋಬರ್ 2024, 10:49 IST
Last Updated 29 ಅಕ್ಟೋಬರ್ 2024, 10:49 IST
ಇಡಿ ಲೋಗೊ
ಇಡಿ ಲೋಗೊ    

ನವದೆಹಲಿ: 2024ರ ಲೋಕಸಭಾ ಚುನಾವಣೆ ವೇಳೆ ಆನ್‌ಲೈನ್ ಬೆಟ್ಟಿಂಗ್, ಐಪಿಎಲ್ ಕ್ರಿಕೆಟ್ ಪಂದ್ಯಗಳ ಅಕ್ರಮ ಪ್ರಸಾರಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಆರೋಪದಡಿ 'Fairplay'ಜಾಲತಾಣದ ಕಚೇರಿ ಮೇಲೆ ಜಾರಿ ನಿರ್ದೆಶನಾಲಯವು(ಇ.ಡಿ) ದಾಳಿ ನಡೆಸಿದೆ.

ಗುಜರಾತ್‌ನ ಕಛ್ ಮತ್ತು ಮುಂಬೈನಲ್ಲಿ ನಡೆದ ದಾಳಿ ವೇಳೆ ನಗದು, ಬ್ಯಾಂಕ್ ಡೆಪಾಸಿಟ್ ಮತ್ತು ಬೆಳ್ಳಿ ಗಟ್ಟಿಗಳು ಸೇರಿ ಸುಮಾರು ₹4 ಕೋಟಿ ಮೌಲ್ಯದ ಸ್ವತ್ತನ್ನು ಇ.ಡಿ ವಶಕ್ಕೆ ಪಡೆದಿದೆ. ಇದರ ಜೊತೆಗೆ ಅಕ್ರಮ ವ್ಯವಹಾರದ ದಾಖಲೆಗಳು, ಡಿಜಿಟಲ್ ಉಪಕರಣಗಳು ಮತ್ತು ಚರಾಸ್ತಿಗಳನ್ನು ವಶಕ್ಕೆ ಪಡೆಯಲಾಗಿದೆ.

'Fairplay' ಜಾಲತಾಣಕ್ಕೆ ತಾಂತ್ರಿಕ ಮತ್ತು ಹಣಕಾಸಿನ ನಿರ್ವಹಣಾ ನೆರವು ನೀಡಿದ ಜನರ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ.

ADVERTISEMENT

'Fairplay' ವಿರುದ್ಧ ಮುಂಬೈ ಸೈಬರ್ ಅಪರಾಧ ವಿಭಾಗದಲ್ಲಿ ವಯಕಾಮ್ 18 ಮೀಡಿಯಾ ಪ್ರೈವೇಟ್ ಲಿಮಿಟೇಡ್ ದಾಖಲಿಸಿರುವ ಪ್ರಕರಣ ಆಧಾರದ ಮೇಲೆ ಇ.ಡಿ ಪಿಎಂಎಲ್‌ಎ ಅಡಿ ಪ್ರಕರಣ ದಾಖಲಿಸಿಕೊಂಡಿದೆ.

ತಮ್ಮ ತನಿಖೆಯಲ್ಲಿ ಫೇರ್‌ಪ್ಲೇ ಅಕ್ರಮದ ಪ್ರಮುಖ ವ್ಯಕ್ತಿ ಕ್ರಿಶ್ ಲಕ್ಷ್ಮೀ ಚಂದ್ ದಾಸ್ ಎಂದು ತಿಳಿದುಬಂದಿದ್ದು, ಪ್ಲೇ ವೆಂಚರ್ಸ್ ಎನ್.ವಿ ಮುಂತಾದ ಸಂಸ್ಥೆಗಳನ್ನು ತನ್ನ ಹೆಸರಿನಲ್ಲಿ ನೋಂದಣಿ ಮಾಡಿಸಿಕೊಂಡಿದ್ದಾನೆ. ದುಬೈನಿಂದ ಫೇರ್‌ಪ್ಲೇ ಕಾರ್ಯಾಚರಿಸುತ್ತಿರುವುದನ್ನು ಇ.ಡಿ ಪತ್ತೆ ಮಾಡಿದೆ.

ಈ ವರ್ಷ ಜೂನ್‌ನಲ್ಲಿ ಪ್ರಕರಣದ ವಿಚಾರಣೆ ಆರಂಭಿಸಿದಾಗಿನಿಂದ ಇ.ಡಿ ಮೂರು ಬಾರಿ ದಾಳಿ ನಡೆಸಿದೆ. ₹117 ಕೋಟಿಗೂ ಅಧಿಕ ಮೊತ್ತದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.