ADVERTISEMENT

ಚೀನಾಗೆ ಮಾನವ ಕೂದಲು ಕಳ್ಳಸಾಗಣೆ: ಜಾರಿ ನಿರ್ದೇಶನಾಲಯ ತನಿಖೆ

ಪಿಟಿಐ
Published 15 ಫೆಬ್ರುವರಿ 2022, 1:32 IST
Last Updated 15 ಫೆಬ್ರುವರಿ 2022, 1:32 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: ಮ್ಯಾನ್ಮಾರ್ ಮೂಲಕ ಚೀನಾಗೆ ದೇಶದಿಂದ ಹವಾಲ ಜಾಲದ ಮೂಲದ ಮಾನವ ಕೂದಲು ಕಳ್ಳಸಾಗಣೆ ಹಾಗೂ ಅಕ್ರಮ ಹಣಕಾಸು ವರ್ಗಾವಣೆ ಮಾಡಿರುವ ಭಾರಿ ಪ್ರಕರಣವೊಂದನ್ನು ಜಾರಿ ನಿರ್ದೇಶನಾಲಯ (ಇಡಿ) ಪತ್ತೆ ಮಾಡಿದೆ.

ಈ ಸಂಬಂಧ ದೇಶದಾದ್ಯಂತ ಹಲವು ಕಡೆ ದಾಳಿ ನಡೆಸಿರುವ ಇಡಿ, 139 ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿದೆ.

ಚೀನಾ ಮೂಲದ ಆನ್‌ಲೈನ್ ಬೆಟ್ಟಿಂಗ್ ಮೊಬೈಲ್ ಅಪ್ಲಿಕೇಶನ್‌ ಒಂದರ ಮೂಲಕ ಹಣ ವರ್ಗಾವಣೆ ಪ್ರಕರಣದ ತನಿಖೆ ನಡೆಸುವ ಸಂದರ್ಭದಲ್ಲಿ ಈ ಜಾಲ ಪತ್ತೆಯಾಗಿದೆ. ದಾಳಿ ಸಂದರ್ಭ ₹1.20 ಕೋಟಿ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಇಡಿ ಹೇಳಿದೆ.

ADVERTISEMENT

ಮ್ಯಾನ್ಮಾರ್ ಮೂಲಕ ಅಕ್ರಮವಾಗಿ, ಚೀನಾಗೆ ಭಾರತದಿಂದ ಮಾನವ ಕೂದಲು ಕಳ್ಳಸಾಗಣೆಯಾಗಿದೆ. ಅದಕ್ಕೆ ಪಾವತಿಯಾಗಿ ಭಾರಿ ಮೊತ್ತದ ನಗದನ್ನು ಹವಾಲ ಜಾಲದ ಮೂಲಕ ತಲುಪಿಸಲಾಗಿದೆ ಎಂದು ಇಡಿ ಹೇಳಿದೆ.

ಅಕ್ರಮ ರಫ್ತಿಗೆ ಅನಧಿಕೃತ ಮಾರ್ಗವನ್ನು ಬಳಸಿಕೊಂಡಿದ್ದು, ಮ್ಯಾನ್ಮಾರ್ ಗಡಿಯ ಮೂಲಕ ಚೀನಾಗೆ ಕೂದಲು ಕಳ್ಳಸಾಗಣೆಯಾಗಿದೆ. ಈ ಕುರಿತು ತನಿಖೆ ಮುಂದುವರಿದಿದೆ ಎಂದು ಇಡಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.