ADVERTISEMENT

ಮಹಾರಾಷ್ಟ್ರ, ಗುಜರಾತ್‌: ಹಲವೆಡೆ ಇ.ಡಿ ಶೋಧ

ಪಿಟಿಐ
Published 14 ನವೆಂಬರ್ 2024, 5:39 IST
Last Updated 14 ನವೆಂಬರ್ 2024, 5:39 IST
<div class="paragraphs"><p>ಇ.ಡಿ</p></div>

ಇ.ಡಿ

   

ಮುಂಬೈ: ಮಾಲೇಗಾಂವ್‌ ಮೂಲದ ವ್ಯಾಪಾರಿಯ ವಿರುದ್ಧ ದಾಖಲಾಗಿರುವ ಹಣ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಮಹಾರಾಷ್ಟ್ರ ಮತ್ತು ಗುಜರಾತ್‌ ರಾಜ್ಯದ ಹಲವು ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಿದರು.

ಹಣ ಅಕ್ರಮ ವರ್ಗಾವಣೆ ಆರೋಪದಲ್ಲಿ ಮಾಲೇಗಾಂವ್‌ನ ವ್ಯಾಪಾರಿ ಸಿರಾಜ್‌ ಅಹ್ಮದ್ ಹಾರೂನ್‌ ಮೆಮನ್ ವಿರುದ್ಧ ಪೊಲೀಸರು ಕಳೆದ ವಾರ ಎಫ್‌ಐಆರ್‌ ದಾಖಲಿಸಿದ್ದರು.

ADVERTISEMENT

ಮಾಲೇಗಾಂವ್‌ನಲ್ಲಿ ಚಹಾ ಮತ್ತು ತಂಪು ಪಾನೀಯಗಳ ಏಜೆನ್ಸಿ ಹೊಂದಿರುವ ಹಾರೂನ್‌ ಅವರು ₹100 ಕೋಟಿಗೂ ಹೆಚ್ಚು ಮೊತ್ತದ ವಹಿವಾಟು ನಡೆಸಲು ಹಲವರ ಬ್ಯಾಂಕ್‌ ಖಾತೆಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಆರೋಪ ಇದೆ.

ಇ.ಡಿ ಅಧಿಕಾರಿಗಳು ಹಣದ ಅಕ್ರಮ ವಹಿವಾಟು ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಮಹಾರಾಷ್ಟ್ರದ ಮಾಲೇಗಾಂವ್, ನಾಶಿಕ್ ಮತ್ತು ಮುಂಬೈ ಅಲ್ಲದೆ ಗುಜರಾತ್‌ನ ಸೂರತ್‌ ಹಾಗೂ ಅಹಮದಾಬಾದ್‌ನಲ್ಲಿ ಒಟ್ಟು 13 ಸ್ಥಳಗಳಲ್ಲಿ ಶೋಧ ನಡೆಸಿದ್ದಾರೆ. 

ಆರೋಪಿಯು ಮಹಾರಾಷ್ಟ್ರದ ವಿಧಾನಸಭಾ ಚುನಾವಣೆಗೆ ಬಳಸಲು ಹಣವನ್ನು ಅಕ್ರಮ ವರ್ಗಾವಣೆ ಮಾಡಿಕೊಂಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಇದಕ್ಕಾಗಿ, ನಾಶಿಕ್ ಮರ್ಚಂಟ್‌ ಕೋಆಪರೇಟಿವ್‌ ಬ್ಯಾಂಕ್‌ನಲ್ಲಿ ಹೊಸ ಖಾತೆಗಳನ್ನು ತೆರೆಯಲು ಹನ್ನೆರಡಕ್ಕೂ ಹೆಚ್ಚು ಮಂದಿಯ ಕೆವೈಸಿ (ಪ್ಯಾನ್‌, ಆಧಾರ್‌ ಮಾಹಿತಿ) ವಿವರಗಳನ್ನು ತೆಗೆದುಕೊಂಡಿದ್ದಾನೆ ಎಂದು ಹೇಳಲಾಗಿದೆ. 

ಡೆಬಿಟ್‌ ಮತ್ತು ಕ್ರೆಡಿಟ್‌ ಕಾರ್ಡ್‌ಗಳನ್ನು ಬಳಸಿ ಸುಮಾರು 170 ಬ್ಯಾಂಕ್‌ ಶಾಖೆಗಳಿಂದ ₹100 ಕೋಟಿಗೂ ಅಧಿಕ ಹಣ ವರ್ಗಾವಣೆ ಮಾಡಿರುವುದನ್ನು ಇ.ಡಿ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.