ಚೆನ್ನೈ: ತಮಿಳು ಚಿತ್ರ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್‌ಗೆ ಸಂಬಂಧಿಸಿದ 10 ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯದ(ಇ.ಡಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ.
‘ಲೈಕಾ’ ತಮಿಳುನಾಡಿನ ಪ್ರಮುಖ ಚಿತ್ರ ನಿರ್ಮಾಣ ಸಂಸ್ಥೆಯಾಗಿದ್ದು, 'ಪೊನ್ನಿಯಿನ್ ಸೆಲ್ವನ್ 2' ಮತ್ತು ಕಮಲ್ ಹಾಸನ್ ಅವರ 'ವಿಕ್ರಮ್' ಮುಂತಾದ ಸೂಪರ್ ಹಿಟ್ ಚಿತ್ರಗಳನ್ನು ನಿರ್ಮಾಣ ಮಾಡಿದೆ.
‘ಇಂಡಿಯನ್ 2’ ಚಿತ್ರದ ಭಾಗ–2 ಅನ್ನೂ ಸಹ ಲೈಕಾ ನಿರ್ಮಾಣ ಮಾಡುತ್ತಿದೆ.
3 ತಿಂಗಳ ಹಿಂದೆ, ಹಲವು ಚಿತ್ರ ನಿರ್ಮಾಪಕರು, ನಟರು, ವಿತರಕ ಸಂಸ್ಥೆಗಳು ಮತ್ತು ಫೈನಾನ್ಶಿಯರ್‌ಗಳ ಮನೆಗಳ ಮೇಲೆ ಇ.ಡಿ ದಾಳಿ ನಡೆಸಿತ್ತು.
ದಾಳಿ ವೇಳೆ, ಹಣ ವರ್ಗಾವಣೆ ಕುರಿತ ಕೆಲ ಡಿಜಿಟಲ್ ಮಾಹಿತಿ ಪತ್ತೆಯಾಗಿದೆ ಎಂದು ಇ.ಡಿ ಮೂಲಗಳು ತಿಳಿಸಿವೆ. ಖಾಸಗಿ ಫೈನಾನ್ಶಿಯರ್‌ಗಳ ಜೊತೆಗಿನ ಹಣದ ವಹಿವಾಟಿನ ಬಗ್ಗೆ ಮಾಹಿತಿ ನೀಡಲಾಗಿಲ್ಲ ಎಂದು ಅವು ಹೇಳಿವೆ.
ದಾಖಲೆ ಇಲ್ಲದ ₹26 ಕೋಟಿ ಹಣ ಮತ್ತು ₹3 ಕೋಟಿ ಮೌಲ್ಯದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಹಿಂದೆ ನಡೆಸಿದ ಇ.ಡಿ ದಾಳಿಗಳ ಮುಂದುವರಿದ ಭಾಗವಾಗಿ ಈ ಶೋಧ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.