ADVERTISEMENT

₹17 ಕೋಟಿ ನಗದು ಜಪ್ತಿ ಮಾಡಿದ ಇ.ಡಿ

ಮೊಬೈಲ್‌ ಗೇಮಿಂಗ್‌ ಆ್ಯಪ್‌ ಪ್ರಚಾರಕರ ಹಣ ಅಕ್ರಮ ವರ್ಗಾವಣೆ ಪ್ರಕರಣ

ಪಿಟಿಐ
Published 10 ಸೆಪ್ಟೆಂಬರ್ 2022, 19:42 IST
Last Updated 10 ಸೆಪ್ಟೆಂಬರ್ 2022, 19:42 IST
ಇ.ಡಿ
ಇ.ಡಿ   

ನವದೆಹಲಿ/ಕೋಲ್ಕತ್ತ: ‘ಮೊಬೈಲ್‌ ಗೇಮಿಂಗ್‌ ಆ್ಯಪ್‌ ಪ್ರಚಾರಕರ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲ್ಕತ್ತದ ಆರು ಕಡೆ ಶೋಧ ಕಾರ್ಯಾಚರಣೆ ನಡೆಸಿ ಒಟ್ಟು ₹17 ಕೋಟಿ ನಗದು ಜ‍ಪ್ತಿ ಮಾಡಲಾಗಿದೆ’ ಎಂದು ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

‘ಇ–ನುಗ್ಗೆಟ್ಸ್‌’ ಗೇಮಿಂಗ್‌ ಆ್ಯಪ್‌ನ ಪ್ರಚಾರಕನನ್ನು ಅಮೀರ್‌ ಖಾನ್‌ ಎಂದು ಗುರುತಿಸಲಾಗಿದೆ ಎಂದು ಇ.ಡಿ ಹೇಳಿಕೆಯಲ್ಲಿ ತಿಳಿಸಿದೆ.

ಹಣ ಅಕ್ರಮ ವರ್ಗಾವಣೆ ಆರೋಪದಲ್ಲಿ 2021ರಲ್ಲಿ ಕೋಲ್ಕತ್ತ ಪೊಲೀಸರು ಈ ಕಂಪನಿಯ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಂಡಿದ್ದರು. ಈ ಆ್ಯಪ್‌ನ ನಿರ್ವಾಹಕರಿಗೆ ಚೀನಾ ನಿಯಂತ್ರಣದಲ್ಲಿರುವ ಆ್ಯಪ್‌ಗಳ ಜೊತೆ ನಂಟಿದೆಯೇ ಎಂಬುದರ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ADVERTISEMENT

‘ಐದು ಯಂತ್ರಗಳ ನೆರವಿನಿಂದ ನೋಟುಗಳ ಎಣಿಕೆ ಮಾಡಲಾಗಿದೆ. ಈ ಕಾರ್ಯಕ್ಕೆ ಬ್ಯಾಂಕ್‌ ಸಿಬ್ಬಂದಿಯನ್ನೂ ಬಳಸಿಕೊಳ್ಳಲಾಗಿದೆ. ದಾಳಿ ವೇಳೆ ₹2,000 ಮುಖಬೆಲೆಯ ನೋಟುಗಳೂ ದೊರೆತಿವೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.